ಲಕ್ಷ್ಮೀಶ ಭಟ್ ಇವರಿಗೆ ಹಿಮಾಲಯ ವುಡ್‌ಬ್ಯಾಡ್ಜ್‌ನಲ್ಲಿ ಅರ್ಹತೆ
Saturday, January 17, 2026
ಉಜಿರೆ: ಉಜಿರೆಯ ಎಸ್‌ಡಿಎಂ ಪದವಿ ಪೂರ್ವ ಕಾಲೇಜಿನ ರೋವರ್ ಸ್ಕೌಟ್ ಲೀಡರ್ ಹಾಗೂ ಭೌತಶಾಸ್ತ್ರ ಉಪನ್ಯಾಸಕ ಲಕ್ಷ್ಮೀಶ ಭಟ್ ಅವರು ರೋವರ್ ಸ್ಕೌಟ್ ವಿಭಾಗದ ಉನ್ನತ ಹಂತದ ತರಬೇತಿಯಾದ ಹಿಮಾಲಯ ವುಡ್‌ಬ್ಯಾಡ್ಜ್ ತರಬೇತಿಯಲ್ಲಿ ಅರ್ಹತೆ ಪಡೆದಿದ್ದಾರೆ.
ಅವರು ಸೆ.24 ರಿಂದ 30 ರ ವರೆಗೆ ದೊಡ್ಡಬಳ್ಳಾಪುರದ ದಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ತರಬೇತಿ ಕೇಂದ್ರದಲ್ಲಿ ರೋವರ್ ವಿಭಾಗದ ಲೀಡರ್ ಟ್ರೈನರ್ ರಾಜೇಶ್ ಅವಲಕ್ಕಿ ಇವರ ಶಿಬಿರ ನಾಯಕತ್ವದಲ್ಲಿ ತರಬೇತಿಯನ್ನು ಪಡೆದಿದ್ದರು.
ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ. ಹಾಗೂ ಡಾ. ರಾಜೇಶ್ ಬಿ ಇವರು ಲಕ್ಷ್ಮೀಶ ಭಟ್ ಇವರಿಗೆ ಶುಭ ಹಾರೈಸಿದರು.