ಉಜಿರೆ ಎಸ್ಡಿಎಂ ಆಸ್ಪತ್ರೆಗೆ ಖ್ಯಾತ ಸಂಶೋಧಕ ಡಾ. ಡಿ.ಕೆ. ಹರಿ ದಂಪತಿಗಳ ಭೇಟಿ
Thursday, January 8, 2026
ಉಜಿರೆ: ‘ಭಾರತ್ಗ್ಯಾನ್’ ಮೂಲಕ ಭಾರತೀಯ ನಾಗರೀಕತೆಯ ಜ್ಞಾನದ ವ್ಯಾಪಕ ಸಂಶೋಧನೆ ಮತ್ತು ಪ್ರಚಾರಕ್ಕೆ ಹೆಸರುವಾಸಿಯಾದ, ಲೇಖಕ, ಉಪನ್ಯಾಸಕ, ಚಲನಚಿತ್ರ ನಿರ್ಮಾಪಕ, ಭಾರತದ ಸಂಪ್ರದಾಯ, ಸಂಸ್ಕೃತಿ, ಜಾಗತಿಕ ಕೊಡುಗೆಗಳ ಅಪಾರ ಜ್ಞಾನ ಹೊಂದಿರುವ ಡಾ. ಡಿ.ಕೆ. ಹರಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿದರು.
ಭೇಟಿ ಬಳಿಕ ವಿವಿಧ ವಿಭಾಗದ ಮುಖ್ಯಸ್ಥರನ್ನು ಉದ್ದೇಶಿಸಿ ಮಾತನಾಡಿದ ಅವರು, ಹೆಗ್ಗಡೆಯವರು ಸಮಾಜದ ಬಗ್ಗೆ ಅತ್ಯಂತ ಕಾಳಜಿ ಹೊಂದಿರುವ ಕಾರಣವೇ ಗ್ರಾಮೀಣ ಭಾಗದಲ್ಲಿ ಇಂತಹ ಆಸ್ಪತ್ರೆಯ ಮೂಲಕ ಅತ್ಯಾಧುನಿಕ ವೈದ್ಯಕೀಯ ಸೇವೆ ನೀಡಲಾಗುತ್ತಿದೆ ಎಂದ ಅವರು ಹೈಟೆಕ್ ಸೌಲಭ್ಯವಿರುವ ಡಯಾಲಿಸಿಸ್ ಸೆಂಟರ್ನಲ್ಲಿ ಉಚಿತ ಸೇವೆ, ಆಸ್ಪತ್ರೆಯ ಶುಚಿತ್ವ, ಇಲ್ಲಿರುವ ಮೂಲಭೂತ ಸೌಲಭ್ಯಗಳು ಮತ್ತು ಲಭ್ಯವಿರುವ ವೈದ್ಯಕೀಯ ಸೇವೆಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಅವರು ಡಾ. ಡಿ.ಕೆ. ಹರಿ ದಂಪತಿಗಳನ್ನು ಸ್ವಾಗತಿಸಿ, ಬರಮಾಡಿಕೊಂಡರು. ವಿವಿಧ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.