ಚಿನ್ನದ ಸರ ಕಳವು: ಪೂರು

ಚಿನ್ನದ ಸರ ಕಳವು: ಪೂರು

ಉಳ್ಳಾಲ: ಬಸ್‌ನಲ್ಲಿ ಕೊಲ್ಯ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಬ್ಯಾಗ್‌ನಲ್ಲಿ ಇದ್ದ ಚಿನ್ನದ ಸರ ಕಳವುಗೈದ ಘಟನೆ ನಡೆದಿದ್ದು, ಈ ಬಗ್ಗೆ ಸ್ವರ್ಶ ಎಂಬವರು ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದಾರೆ.

ಘಟನೆ ವಿವರ: ಸ್ವರ್ಶ ಎಂಬವರು ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ಇರುವ ಕೆಥೋಲಿಕ್ ಪ್ರಾಥಮಿಕ ಸಹಕಾರ ಸಂಘದಲ್ಲಿ ಲಾಕರ್‌ನಲ್ಲಿ ಇಟ್ಟಿದ್ದ ಎರಡು ಚಿನ್ನದ ಸರವನ್ನು ತೆಗೆದುಕೊಂಡು ತನ್ನ ಬ್ಯಾಗಿನಲ್ಲಿ ಇಟ್ಟು ಕೊಲ್ಯ ಕಡೆಗೆ ಬಸ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಅವರ ಬ್ಲಾಗ್‌ನಿಂದ ಸರವನ್ನು ಕಳ್ಳರು ಕಳವುಗೈದಿದ್ದಾರೆ ಎಂದು ಆರೋಪಿಸಲಾಗಿದೆ.

ಕಳ್ಳರು 16 ಗ್ರಾಂ ತೂಕದ ಚಿನ್ನದ ಸರ ಕಳವುಗೈದಿದ್ದು, ಕಳವಾದ ಸೊತ್ತಿನ ಮೌಲ್ಯ 1,90,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article