ಸ್ಕೂಟರ್ ಬಾಕ್ಸ್‌ನಲ್ಲಿಟ್ಟಿದ್ದ ಹಣ ಕಳವು: ದೂರು ದಾಖಲು

ಸ್ಕೂಟರ್ ಬಾಕ್ಸ್‌ನಲ್ಲಿಟ್ಟಿದ್ದ ಹಣ ಕಳವು: ದೂರು ದಾಖಲು

ಕುಂದಾಪುರ: ಬ್ರಹ್ಮಾವರ ತಾಲೂಕು ಹಂದಾಡಿ ಗ್ರಾಮದಲ್ಲಿ ದ್ವಿಚಕ್ರ ವಾಹನದಲ್ಲಿರಿಸಿದ್ದ ಹಣ ಕಳವು ಮಾಡಿದ ಘಟನೆಯೊಂದು ವರದಿಯಾಗಿದೆ.

ಫೆ.13 ರಂದು ರಾತ್ರಿ 7.15 ಗಂಟೆಯಿಂದ 8.30 ಗಂಟೆಯ ಮಧ್ಯೆ, ಬ್ರಹ್ಮಾವರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಎದುರು ನಿಲ್ಲಿಸಿದ್ದ ಸ್ಕೂಟರ್‌ನ ಸೀಟನ್ನು ಯಾರೋ ಕಳ್ಳರು ತೆರೆದು, ಸೀಟಿನ ಕೆಳಭಾಗದ ಡಿಕ್ಕಿಯಲ್ಲಿ ಇಟ್ಟಿದ್ದ ಬ್ಯಾಗ್‌ನಲ್ಲಿದ್ದ ರೂ.83,800 ನಗದು ಹಣವನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.

ಈ ಸಂಬಂಧ ಬಾರಕೂರು ಅಂಚೆಯ ಕಚ್ಚೂರು ನಿವಾಸಿ ಸತೀಶ್ ಮೈಂದನ್ ಅವರು ಬ್ರಹ್ಮಾವರ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article