ಫೆ.12 ರಿಂದ 14 ರವರೆಗೆ ಕುಡುಂಬೂರು ನಡುಗಿರಿ ಬಂಡಿ ನೇಮೋತ್ಸವ

ಫೆ.12 ರಿಂದ 14 ರವರೆಗೆ ಕುಡುಂಬೂರು ನಡುಗಿರಿ ಬಂಡಿ ನೇಮೋತ್ಸವ


ಬೈಕಂಪಾಡಿ: ಇಲ್ಲಿನ ಬೈಕಂಪಾಡಿ ಕೈಗಾರಿಕಾ ವಲಯದ ಮುಂಗಾರು ಸಮೀಪದ ಕುಡುಂಬೂರು ನಡುಗಿರಿ ಗ್ರಾಮದೈವ ಜಾರಂದಾಯ ಹಾಗೂ ಸಪರಿವಾರ ದೈವಗಳ ದೈವಸ್ಥಾನದ ವಾರ್ಷಿಕ ಬಂಡಿ ನೇಮೋತ್ಸವವು ಫೆ.12 ರಿಂದ 14ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

ಫೆ.12 ರಂದು ಬೆಳಗ್ಗೆ 8 ಗಂಟೆಯಿಂದ ಅನ್ನಪೂರ್ಣೇಶ್ವರಿ ಅಮ್ಮನವರಿಗೆ ಪೂಜೆ, ಹೊಳ್ಳರ ಚಾವಡಿಯಲ್ಲಿ ಜಾರಂದಾಯ ಸಪರಿವಾರ ದೈವಗಳಲ್ಲಿ ಪ್ರಾರ್ಥನೆ, ಹಾಗೂ ನಾಗದೇವರಿಗೆ ತಂಬಿಲ ಸೇವೆ. ಸಂಜೆ 5 ಗಂಟೆಗೆ ದೈವಗಳ ಭಂಡಾರ ಏರುವುದು. ರಾತ್ರಿ 7.30ಕ್ಕೆ ‘ಮೈಸಂದಾಯ ದೈವದ ನೇಮೋತ್ಸವ’, ರಾತ್ರಿ 8.30ಕ್ಕೆ ‘ಕಾಂತೇರಿ ಜುಮಾದಿ’, ‘ಸರಳ ಜುಮಾದಿ ಬಂಟ ದೈವಗಳ ಬಂಡಿ ನೇಮೋತ್ಸವ’ ನಡೆಯಲಿದೆ.


ಫೆ.13 ರಂದು ಮಧ್ಯಾಹ್ನ 12 ಗಂಟೆಗೆ ‘ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರಿಗೆ ವಿಶೇಷ ಅಲಂಕಾರ ಪೂಜೆ’, ಮಧ್ಯಾಹ್ನ 12.30 ರಿಂದ 3 ಗಂಟೆಯವರೆಗೆ ಸಾರ್ವಜನಿಕ ‘ಮಹಾ ಅನ್ನ ಸಂತರ್ಪಣೆ’ ನಡೆಯಲಿದೆ. ಹಾಗೂ ರಾತ್ರಿ 9 ಗಂಟೆಗೆ ‘ಶ್ರೀ ಜಾರಂದಾಯ ಬಂಟ ದೈವಗಳ ಬಂಡಿ ನೇಮೋತ್ಸವ’ ನಡೆಯಲಿದೆ.

ಫೆ.14 ರಂದು ರಾತ್ರಿ 7 ಗಂಟೆ ಪಿಲಿಚಂಡಿ ದೈವದ ಎಣ್ಣೆಬೂಲ್ಯ ರಾತ್ರಿ 10 ಗಂಟೆಗೆ ‘ಪಿಲಿಚಂಡಿ ದೈವದ ಬಂಡಿ ನೇಮೋತ್ಸವ’ ನಡೆಯಲಿದೆ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article