ಎಮ್ಮೆಕೆರೆ ಈಜುಕೊಳ ಕಾಮಗಾರಿಯಲ್ಲಿ ಅವ್ಯವಹಾರ: ತನಿಖೆಗೆ ಆಗ್ರಹ

ಎಮ್ಮೆಕೆರೆ ಈಜುಕೊಳ ಕಾಮಗಾರಿಯಲ್ಲಿ ಅವ್ಯವಹಾರ: ತನಿಖೆಗೆ ಆಗ್ರಹ

ಮಂಗಳೂರು: ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಎಮ್ಮೆಕೆರೆಯಲ್ಲಿ 24.94 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಅಂತಾರಾಷ್ಟ್ರೀಯ ದರ್ಜೆಯ ಈಜುಕೊಳದ ಕಾಮಗಾರಿಯಲ್ಲಿ ಸಾಕಷ್ಟು ಅವ್ಯಹಾರಗಳು ನಡೆದಿವೆ. ಈ ಬಗ್ಗೆ ಸ್ವತಂತ್ರ ಅಥವಾ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಮ ಆದ್ಮಿ ಪಕ್ಷದ ದ.ಕ ಜಿ ಘಟಕ ಆಗ್ರಹಿಸಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿ ಸಂಘಟನ ಕಾರ್ಯದರ್ಶಿ ಎಸ್.ಎಲ. ಪಿಂಟೋ, ಈಜು ಕೊಳದ ನಿರ್ಮಾಣ ಸಮಯದಲ್ಲಿ ಹೆಚ್ಚಿನ ವೆಚ್ಚ ಮತ್ತು ವ್ಯತ್ಯಾಸಗಳು ಹಾಗೂ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಆಪ್ ಮಂಗಳೂರು ಸಂಶೋಧನ ತಂಡದ ಗಮನಕ್ಕೆ ಬಂದಿದೆ. ಈಜುಕೊಳದ ಕಟ್ಟದ ರಚನೆಯನ್ನು ನೆಲಮಟ್ಟದಿಂದ ಎತ್ತರಿಸಲಾಗಿದ್ದು, ಇದಕ್ಕೆ ಅಗತ್ಯವಿರುವ ಪೈಲಿಂಗ್ ಕಾಮಗಾರಿಗೆ 4-6 ಕೋ.ರೂ. ಹೆಚ್ಚುವರಿ ವೆಚ್ಚವಾಗಿದೆ. ಈ ಪೈಲಿಂಗ್ ವೆಚ್ಚವನ್ನು ಪ್ರತಿ ಮೀ.ಗೆ 3,400 ರೂ. ಬದಲು 4,234 ರೂ. ಗೆ ಬಿಲ ಮಾಡಲಾಗಿದೆ. ನೀರಿನ ಅಡಿಯಲ್ಲಿರುವ ಎಲ ಇಡಿ ದೀಪಗಳು, ಇತರ ಎಲ ಇಡಿ ದೀಪಗಳು, ಪೂಲ ಫಿಲ್ಟರ್‌ಗಳಿಗೆ ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಮೊತ್ತ ನಮೂದಿಸಲಾಗಿದೆ. ಸದ್ಯ ನೀರಿನ ಅಡಿಯಲ್ಲಿ ಯಾವ ದೀಪವನ್ನೂ ಅಳವಡಿಸಿಲ್ಲ. ಸರಕಾರ ಈಜುಕೊಳದ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ನೀಡಿದೆ. ಈ ಸಂಸ್ಥೆ ದುಬಾರಿ ವೆಚ್ಚವನ್ನು ಸಾರ್ವಜನಿಕರಿಗೆ ವಿಧಿಸುತ್ತಿದೆ. ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಮತ್ತು ರಿಯಾಯಿತಿ ಪಾಸ್ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.

2016ರಲ್ಲಿ ಸಂತ ಅಲೋಶಿಯಸ್ ಕಾಲೇಜಿನಲ್ಲಿ ನಿರ್ಮಾಣ ಮಾಡಲಾಗಿರುವ ಇದೇ ಮಾದರಿಯ ಈಜುಕೊಳಕ್ಕೆ 8 ಕೋ.ರೂ. ವೆಚ್ಚವಾಗಿದ್ದು, 2023ರಲ್ಲಿ ಎನ್‌ಐಟಿಕೆಯಲ್ಲಿ ನಿರ್ಮಾಣ ಮಾಡಲಾಗಿರುವ ಈಜುಕೊಳಕ್ಕೆ 7.39 ಕೋ.ರೂ ವೆಚ್ಚವಾಗಿದೆ. ಎಮ್ಮೆಕೆರೆಯಲ್ಲಿ ಹೆಚ್ಚುವರಿ ಒಂದು ಈಜುಕೊಳವಿದರೂ ಸಹ ಗರಿಷ್ಠ 16-18 ಕೋ.ರೂ. ವೆಚ್ಚ ಆಗಬಹುದು. ಆದರೆ ಪ್ರಸ್ತುತ 24.94 ಕೋ.ರೂ. ವೆಚ್ಚವಾಗಿದ್ದು, ಆ ಮೂಲಕ ಸರಕಾರದ ಖಜನೆಗೆ ಭಾರಿ ನಷ್ಟ ಎಸಗಲಾಗದೆ. ಈ ಬಗ್ಗೆ ಲೋಕಾಯುಕ್ತಕ್ಕೂ ದೂರು ನೀಡಲು ಉದ್ದೇಶಿಸಲಾಗಿದೆ ಎಂದರು.

ಪಕ್ಷದ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್, ಸಾಮಾಜಿಕ ಮಾಧ್ಯಮ ಉಸ್ತುವಾರಿ ದೇವಿಪ್ರಸಾದ್ ಬಜಿಲಕೇರಿ, ಸುಜತಾ ಯತೀಶ್, ಕಬೀರ್ ಕಾಟಿಪಳ್ಳ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article