ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಟ್ಟಡ ಪರವಾನಗಿ ನೀಡುವ ತಂತ್ರಾಂಶ ಸ್ಥಗಿತ: ಶಾಸಕ ಕಾಮತ್ ಮನವಿಗೆ ಸ್ಪಂದಿಸಿದ ಸಚಿವರು

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಟ್ಟಡ ಪರವಾನಗಿ ನೀಡುವ ತಂತ್ರಾಂಶ ಸ್ಥಗಿತ: ಶಾಸಕ ಕಾಮತ್ ಮನವಿಗೆ ಸ್ಪಂದಿಸಿದ ಸಚಿವರು


ಮಂಗಳೂರು: ರಾಜ್ಯಾದ್ಯಂತ ಕಳೆದೆರಡು ತಿಂಗಳಿಂದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಟ್ಟಡ ಪರವಾನಗಿ ನೀಡುವ ತಂತ್ರಾಂಶವು ಸ್ಥಗಿತಗೊಂಡ ಪರಿಣಾಮ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದ್ದ ಬಗ್ಗೆ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಅವರ ಮನವಿಗೆ ಸ್ಪಂದಿಸಿದ ನಗರಾಭಿವೃದ್ಧಿ ಮತ್ತು ಪೌರಾಡಳಿತ ಇಲಾಖೆಯು ಸಮಸ್ಯೆಯನ್ನು ಬಗೆಹರಿಸಿ ಆದೇಶ ಹೊರಡಿಸಿದೆ.

ರಾಜ್ಯ ಸರಕಾರ ಏಕಾಏಕಿ ನಿರ್ಮಾಣ-2 ತಂತ್ರಾಂಶವನ್ನು ಸ್ಥಗಿತಗೊಳಿಸಿ ಯುನಿಫೈಡ್ ಲ್ಯಾಂಡ್ ಮ್ಯಾನೇಜೈಂಟ್ ಸಿಸ್ಟಮ್ (ಯುಎಲ್ಎಂಎಸ್) ಅನ್ನು ಜಾರಿಗೆ ತಂದಿದ್ದೇ ಸಮಸ್ಯೆಗೆ ಕಾರಣವಾಗಿದ್ದು, ಹಳೆಯ ನಿರ್ಮಾಣ- 2 ತಂತ್ರಾಂಶ ಸಹಿತ ಹೊಸ ಯುಎಲ್‌ಎಂಎಸ್ ತಂತ್ರಾಂಶವೂ ಇಲ್ಲವಾಗಿ ಜನರಿಗೆ ಕಟ್ಟಡ ಪರವಾನಗಿ ಸಿಗದೇ ಪರದಾಡುವಂತಾಗಿತ್ತು. ಇದರಿಂದಾಗಿ ಮನೆ, ಅಪಾರ್ಟ್‌ ಮೆಂಟ್, ವಾಣಿಜ್ಯ ಸೇರಿದಂತೆ ಎಲ್ಲಾ ರೀತಿಯ ಕಟ್ಟಡ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿದ್ದ ಸಾವಿರಾರು ಮಂದಿ ತಿಂಗಳುಗಟ್ಟಲೆ ಕಾಯುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೇ, ಕಟ್ಟಡ ಗುತ್ತಿಗೆದಾರರು, ಎಂಜಿನಿಯ‌ರ್ ಗಳು, ಕೂಲಿ ಕಾರ್ಮಿಕರಿಗೂ ಬಹಳಷ್ಟು ಸಮಸ್ಯೆಯಾಗಿತ್ತು ಎಂದು ನಗರಾಭಿವೃದ್ಧಿ ಕಾರ್ಯದರ್ಶಿ ಮತ್ತು ಪೌರಾಡಳಿತ ಇಲಾಖೆಯ ನಿರ್ದೇಶಕರ ಗಮನಕ್ಕೆ ತಂದಿದ್ದರು. 

ಇದೀಗ ಸಾರ್ವಜನಿಕರ ಹಿತದೃಷ್ಟಿಯಿಂದ ಶಾಸಕರು ಮಾಡಿದ ಮನವಿ ಮೇರೆಗೆ ಇಲಾಖೆಯೂ ಸ್ಪಂದಿಸಿದ್ದು ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ. ಅಲ್ಲದೇ ನೂತನ ತಂತ್ರಾಂಶದಲ್ಲಿ ಡಿಪ್ಲೋಮಾ ಸಿವಿಲ್ ಎಂಜಿನಿಯರ್‌ಗಳನ್ನು ಸೂಪರ್‌ವೈಸ‌ರ್ ಎಂದು ಉಲ್ಲೇಖಿಸಿರುವುದರಿಂದ ಅನುಭವಿ ವೃತ್ತಿಪರ ಎಂಜಿನಿಯರ್‌ಗಳ ಸಹಿತ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಆ ಪದದ ಬದಲು ಸಿವಿಲ್ ಎಂಜಿನಿಯರ್ಸ್ ಪದ ಬಳಸುವ ಬಗ್ಗೆಯೂ ಶಾಸಕರು ಗಮನಕ್ಕೆ ತಂದಿದ್ದು ಮುಂದಿನ ದಿನಗಳಲ್ಲಿ ಆ ಬಗ್ಗೆಯೂ ಸಮಸ್ಯೆ ಇತ್ಯರ್ಥವಾಗುವ ಸಾಧ್ಯತೆಗಳಿವೆ. ಇಂಜಿನಿಯರ್ ಗಳಾದ ಜಿ.ಯೋಗೀಶ್ ಪೈ,  ಮೊಹಮ್ಮದ್ ಇಕ್ಬಾಲ್ ಈ ವೇಳೆ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article