ಪೆಟ್ರೋಲ್ ಹಾಕಿಸಿ ದುಡ್ಡು ನೀಡದೆ ಪರಾರಿ
Friday, February 13, 2026
ಮಂಗಳೂರು: ಇಂಧನ ಹಾಕಿಸಿಕೊಂಡು ಹಣ ನೀಡದೆ ಕಾರು ಚಾಲಕನೊಬ್ಬ ಪರಾರಿಯಾಗಿರುವ ಘಟನೆ ಸುಳ್ಯ ಸಮೀಪದ ಅರಂತೋಡಿನ ನಯಾರ ಪೆಟ್ರೋಲ್ ಬಂಕ್‌ನಲ್ಲಿ ಇಂದು ನಡೆದಿದೆ.
ಅರಂತೋಡಿನ ನಯಾರ ಪೆಟ್ರೋಲ್ ಬಂಕ್‌ಗೆ ಬಂದ ಕಾರು ಚಾಲಕ, ಸುಮಾರು 2,510 ರೂಪಾಯಿ ಮೊತ್ತದ ಪೆಟ್ರೋಲ್ ಹಾಕಿಸಿಕೊಂಡಿದ್ದಾನೆ. ಪೆಟ್ರೋಲ್ ಹಾಕಿದ ನಂತರ ಹಣ ನೀಡುವಂತೆ ಸಿಬ್ಬಂದಿ ಕೇಳಿದಾಗ, ಚಾಲಕ ಏಕಾಏಕಿ ಕಾರನ್ನು ಚಲಾಯಿಸಿಕೊಂಡು ವೇಗವಾಗಿ ಅಲ್ಲಿಂದ ಪರಾರಿಯಾಗಿದ್ದಾನೆ. ಇದರಿಂದ ಗಾಬರಿಗೊಂಡ ಬಂಕ್ ಸಿಬ್ಬಂದಿ ಕೂಡಲೇ ಮುಂದಿನ ಜಾಲ್ಸೂರು ಚೆಕ್ ಪೋಸ್ಟ್ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆಯೇ ಅಲರ್ಟ್ ಆದ ಜಾಲ್ಸೂರು ಚೆಕ್ ಪೋಸ್ಟ್ ಬಳಿಯ ಅರಣ್ಯ ಇಲಾಖೆ ಸಿಬ್ಬಂದಿಗಳು, ಸ್ಥಳೀಯ ಆಟೋ ಚಾಲಕರು ಹಾಗೂ ಜಾಲ್ಸೂರು ಪೆಟ್ರೋಲ್ ಬಂಕ್ ಸಿಬ್ಬಂದಿಗಳು ಕಾರನ್ನು ತಡೆಯಲು ಪ್ರಯತ್ನಿಸಿದ್ದಾರೆ. ರಸ್ತೆಗೆ ಅಡ್ಡಲಾಗಿ ನಿಂತು ಕಾರನ್ನು ನಿಲ್ಲಿಸುವಂತೆ ಸೂಚಿಸಿದರೂ, ಕಾರು ಚಲಾಯಿಸಿದ ಚಾಲಕ ಯಾರಿಗೂ ಸಿಗದೆ ಪುತ್ತೂರಿನತ್ತ ಪರಾರಿಯಾಗಿದ್ದಾನೆ.