ಕಾಂಗ್ರೆಸ್‌ನಿಂದ ದೇಶದ ಘನತೆ ಕುಗ್ಗಿಸುವ ಪ್ರಯತ್ನ: ಸತೀಶ್ ಕುಂಪಲ

ಕಾಂಗ್ರೆಸ್‌ನಿಂದ ದೇಶದ ಘನತೆ ಕುಗ್ಗಿಸುವ ಪ್ರಯತ್ನ: ಸತೀಶ್ ಕುಂಪಲ

ಮಂಗಳೂರು: ದೆಹಲಿಯಲ್ಲಿ ಎಐ ಇಂಪ್ಯಾಕ್ಟ್ ಶೃಂಗ ಸಭೆಯು ನಡೆಯುತ್ತಿದ್ದ ಸ್ಥಳಕ್ಕೆ ನುಗ್ಗಿ ಅರೆಬೆತ್ತಲೆ ಪ್ರದರ್ಶನ ಮಾಡುವ ಮೂಲಕ ಕಾಂಗ್ರೆಸ್ ದೇಶದ ಘನತೆಯನ್ನು ಕುಗ್ಗಿಸುವ ಪ್ರಯತ್ನ ಪಡುತ್ತಿದೆ. ಇದು ಬಿಜೆಪಿ ಪಕ್ಷದ ಸಭೆಯಲ್ಲ, ಜಾಗತಿಕ ಮಟ್ಟದ ಸಭೆ ಎನ್ನುವುದನ್ನು ಲಕ್ಷಿಸದೆ ಉದ್ದಟತನ ಮೆರೆದಿದ್ದಾರೆ ಎಂದು ಭಾರತೀಯ ಜನತಾ ಪಾರ್ಟಿಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಲ್ಲಿ ದೇಶ ಇವತ್ತು ಸರ್ವಾಂಗೀಣ ಅಭಿವೃದ್ಧಿ ಪಥದಲ್ಲಿದೆ. ವಿದೇಶದ ಅಗ್ರಗಣ್ಯ ನಾಯಕರು ಭಾರತದ ಮಾತಿಗೆ ಮಾನ್ಯತೆ ನೀಡುವ ಕಾಲಘಟ್ಟದಲ್ಲಿ ಇರುವ ಸಂಧರ್ಭದಲ್ಲಿ ಕಾಂಗ್ರೆಸ್ ತನ್ನ ಹೀನ ಸಂಸ್ಕೃತಿಯನ್ನು ಪ್ರದರ್ಶಿಸುವ ಮೂಲಕ ತಾನು ದೇಶದ ವಿರುದ್ಧ ಎನ್ನುವುದನ್ನು ತೋರಿಸಿದೆ ಎಂದು ಕುಂಪಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article