2025-26 ನೇ ಸಾಲಿನ ಜಿಲ್ಲಾ ಮಟ್ಟದ ತೃತೀಯ ಚರಣ ಕಬ್ ಮತ್ತು ಸುವರ್ಣ ಗರಿ ಬುಲ್ ಬುಲ್ ಪರೀಕ್ಷಾ ಶಿಬಿರ
Tuesday, February 10, 2026
ಮೂಡುಬಿದಿರೆ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆಯ ವತಿಯಿಂದ 2025-26 ನೇ ಸಾಲಿನ ಜಿಲ್ಲಾ ಮಟ್ಟದ ತೃತೀಯ ಚರಣ ಕಬ್ ಮತ್ತು ಸುವರ್ಣ ಗರಿ ಬುಲ್ ಬುಲ್ ಪರೀಕ್ಷಾ ಶಿಬಿರದ ಮೊದಲನೆ ಹಂತದ ಪರೀಕ್ಷಾ ಶಿಬಿರವು ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.
ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ತಿಲಕಾ ಅನಂತವೀರ ಜೈನ್ ಪರೀಕ್ಷಾ ಶಿಬಿರವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾ ಕಾರ್ಯದರ್ಶಿ ಪ್ರತೀಮ್ ಕುಮಾರ್ ರವರು ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಭರತ್ ರಾಜ್ ಕೆ., ಕಬ್ ವಿಭಾಗದ ನಾಯಕಿ ಗೀತಾ ಶೆಟ್ಟಿ Pre ALT (C), ಬುಲ್ ಬುಲ್ ವಿಭಾಗದ ನಾಯಕಿ ಸಂಧ್ಯಾ ಶೆಣೈ ALT (F) ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪರೀಕ್ಷಾ ಶಿಬಿರ ಸಹಾಯಕರಾಗಿ ಕಬ್ ವಿಭಾಗದಲ್ಲಿ ಸ್ವರ್ಣಾ ಡಿ, ಜಯಶ್ರೀ, ಸೀಮಾ, ಅಶ್ವಿನಿ ಅಮೀನ್, ಸವಿತಾ ಮೊನೀಸ್, ಕಿಶೋರ್ ಕುಮಾರ್, ಬುಲ್ ಬುಲ್ ವಿಭಾಗದ ಸಹಾಯಕರಾಗಿ ಕಾಮಾಕ್ಷಿ HWB(F), ರೂಪಾ,ಕು.ಹರ್ಷಿಣಿ,ಕು. ಡಾಲಿಯ ಡಿ ಸೋಜಾ, ಶ್ರುತಿ, ಸುರೇಖಾ, ಕಾವ್ಯ, ಸುಜಾತಾ ಶೆಟ್ಟಿ ಸಹಕರಿಸಿದರು.
ಶಿಬಿರದಲ್ಲಿ 84 ಕಬ್ಸ್,82 ಬುಲ್ ಬುಲ್ಸ್ ಒಟ್ಟು 166 ಶಿಬಿರಾರ್ಥಿಗಳು ಭಾಗವಹಿಸಿದರು.
ರೋಟರಿ ಆಂಗ್ಲ ಮಾಧ್ಯಮ ಶಾಲೆ ಮೂಡುಬಿದಿರೆಯ ಗೈಡ್ ಕ್ಯಾಪ್ಟನ್ ವಿನಯ ನಿರೂಪಿಸಿದರು. ಜಯಶ್ರೀ ವಂದನಾರ್ಪಣೆಗೈದರು.

