ಬಿಜೆಪಿ ನೀತಿ ಬಂಡವಾಳ ಶಾಹಿಗಳ ಪರ: ಯಾದವ ಶೆಟ್ಟಿ ಆರೋಪ
Thursday, February 12, 2026
ಮೂಡುಬಿದಿರೆ: ಕೇಂದ್ರ ಸರಕಾರ 4 ಕಾಮಿ೯ಕ ಸಂಹಿತೆಯನ್ನು ರದ್ದುಗೊಳಿಸಬೇಕು, ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ರಕ್ಷಿಸಿ, ರೈತರಿಗೆ ಮಾರಕವಾಗಿರುವ ಬೀಜ ಕಾಯ್ದೆ ಬೇಡ ಹಾಗೂ ವಿದ್ಯುತ್ ಖಾಸಗೀಕರಣ ಬೇಡವೆಂದು ಆಗ್ರಹಿಸಿ ಮೂಡುಬಿದಿರೆಯಲ್ಲಿ ಸಿಐಟಿಯು ವತಿಯಿಂದ ಗುರುವಾರ ಅಖಿಲ ಭಾರತ ಮುಷ್ಕರ-ಪ್ರತಿಭಟನೆ ನಡೆಯಿತು.
ಸಿಐಟಿಯುನ ಜಿಲ್ಲಾ ಉಪಾಧ್ಯಕ್ಷ ಯಾದವ ಶೆಟ್ಟಿ ಮಾತನಾಡಿ, ಬಿಜೆಪಿ-ಆರ್ ಎಸ್ ಎಸ್ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿಲ್ಲ, ಈ ದೇಶದ ಅಸ್ಪ್ರಶ್ಯತೆ, ಅನ್ಯಾಯದ ವಿರುದ್ಧ ಹೋರಾಡಿಲ್ಲ ಬದಲಾಗಿ ಅಧಿಕಾರ ಬಂದಾಗ ಇಲ್ಲಿನ ನೆಲ-ಜಲ ಸಂಪತ್ತನ್ನು ಅಂಬಾನಿ, ಅದಾನಿಗೆ ನೀಡುವ ಮೂಲಕ ಕಾಮಿ೯ಕ ನೀತಿಗಳನ್ನು ತಿದ್ದುಪಡಿ ಮಾಡಿ ಆ ಮೂಲಕ ಬಿಜೆಪಿ ನೀತಿ ಬಂಡವಾಳಶಾಹಿಗಳ ಪರ ಎಂಬುದನ್ನು ಸಾಬೀತುಪಡಿಸಿದೆ ಎಂದು ಆರೋಪಿಸಿದರು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಆಲ್ವೀನ್ ಮಿನೇಜಸ್, ಸಿಐಟಿಯುನ ಜಿಲ್ಲಾ ಉಪಾಧ್ಯಕ್ಷರಾದ ರಮಣಿ, ಮೂಡುಬಿದಿರೆ ತಾಲೂಕು ಪ್ರ. ಕಾಯ೯ದಶಿ೯ ರಾಧ, ಬಿಸಿಯೂಟ ನೌಕರರ ಸಂಘದ ಜಿಲ್ಲಾ ಕಾಯ೯ದಶಿ೯ ಗಿರಿಜ, ಆಟೋ ಯೂನಿಯನ್ ನ ಅಧ್ಯಕ್ಷ ವಿಶ್ವನಾಥ್, ಸಿಐಟಿಯುನ ತಾಲೂಕು ಅಧ್ಯಕ್ಷ ಶಂಕರ್ ಮತ್ತು ಲಕ್ಷ್ಮೀ ಈ ಸಂದಭ೯ದಲ್ಲಿದ್ದರು.

