ಬಾಳೆ ಹೂವನ್ನು ಅರಳಿಸುವ ಮೂಲಕ ಕೆ.ಪಿ.ಎಸ್ ಮಿಜಾರು  ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ ಅನಾವರಣ

ಬಾಳೆ ಹೂವನ್ನು ಅರಳಿಸುವ ಮೂಲಕ ಕೆ.ಪಿ.ಎಸ್ ಮಿಜಾರು ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ ಅನಾವರಣ


ಮೂಡುಬಿದಿರೆ: ತಾಲೂಕಿನ ಕೆ.ಪಿ.ಎಸ್ ಮಿಜಾರ್ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಮಕ್ಕಳ ಸಂತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.


ಮೂಡುಬಿದಿರೆ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಅವರು ಬಾಳೆ ಹೂವನ್ನು ಅ ರಳಿಸುವ ಮೂಲಕ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಅತ್ಯುತ್ತಮ ಆಯೋಜನೆಯ ಬಗ್ಗೆ ಶ್ಲಾಘಿಸಿದರು.


ಅಲ್ಲದೆ ಈ ಕಾರ್ಯಕ್ರಮದಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಪುಷ್ಪಾಲತಾ ಹಾಗೂ ಮಾಜಿ ಅಧ್ಯಕ್ಷ ಇಕ್ಬಾಲ್, ಪೋಷಕ ಸಮಿತಿ ಕಾರ್ಯದರ್ಶಿ ರಮಾನಂದ,  ನಿವೃತ್ತ ಶಿಕ್ಷಕ ನಾಗೇಶ್ ಅವರು ಭಾಗವಹಿಸಿ ಶುಭ ಹಾರೈಸಿದರು. 


ಮುಖ್ಯ ಶಿಕ್ಷಕಿ ನಾಗರತ್ನ ಶಿರೂರುರವರು ಸ್ವಾಗತಿಸಿದರು, ಶಿಕ್ಷಕಿ ಗೀತಾ ಕಾರ್ಯಕ್ರಮ ನಿರೂಪಿಸಿದರು. ಪ್ರೇಮಾ ರವರು ಧನ್ಯವಾದ ನೀಡಿದರು. 


ಶಿಕ್ಷಕಿಯರಾದ ಹೇಮಾವತಿ, ಚೈತ್ರಾ ಶೆಟ್ಟಿ ಹಾಗೂ ಇತರ ಎಲ್ಲಾ ಅತಿಥಿ ಶಿಕ್ಷಕರು ಸಹಕಾರ ನೀಡಿದರು. ಮೂಡುಬಿದಿರೆ ತಾಲೂಕಿನ ಪ್ರಾಥಮಿಕ  ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುಧಾಕರ ಸಾಲ್ಯಾನ್, ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಮಹೇಶ್ವರಿ, ಬಿ.ಐ.ಆರ್.ಟಿ ಸುಶೀಲಾ, ತೆಂಕಮಿಜಾರು ಗ್ರಾಮದ ಮಾಜಿ ಅಧ್ಯಕ್ಷೆ ಶಾಲಿನಿ ಕೆ. ಸಾಲಿಯಾನ್, ಕೆ.ಪಿ.ಎಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಪುಷ್ಪಾ ಹಾಗೂ ಶಿಕ್ಷಕಿ ಪವಿತ್ರ ಅವರು ಆಗಮಿಸಿ ಮಕ್ಕಳು ಮಾರಾಟಕ್ಕಿಟ್ಟಿದ್ದ  ವಸ್ತುಗಳನ್ನು ಖರೀದಿಸುವ ಮೂಲಕ ಪ್ರೋತ್ಸಾಹ ನೀಡಿದರು. 

15 ಕ್ಕಿಂತ ಹೆಚ್ಚಿನ ವಿವಿದ ಬಗೆಯ ವಸ್ತುಗಳು, ಬಗೆ ಬಗೆಯ ತಿಂಡಿ ತಿನಿಸುಗಳು, ತಾಜಾ ಹಣ್ಣು ತರಕಾರಿಗಳ ಮಳಿಗೆಗಳ ಮೂಲಕ ಪೋಷಕರ ಹಾಗೂ ಊರವರ ಸಹಭಾಗಿತ್ವದಿಂದ ವಿದ್ಯಾಥಿ೯ಗಳು ಭರ್ಜರಿಯಾಗಿ ವ್ಯಾಪಾರ ವಹಿವಾಟು ನಡೆಸಿ ಉತ್ತಮ ಲಾಭವನ್ನು ಗಳಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article