ಮೂಡುಬಿದಿರೆ: ಗ್ರಾಮಾಭಿವೃದ್ಧಿ ಯೋಜನೆಯಿಂದ ನಿರ್ಗತಿಕ ಕುಟುಂಬಕ್ಕೆ ವಾತ್ಸಲ್ಯ ಕಿಟ್ ವಿತರಣೆ
Thursday, February 5, 2026
ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ)ವತಿಯಿಂದ ತಾಲೂಕಿನ ಅಲಂಗಾರು ವಲಯದ ಅಮನಬೆಟ್ಟು ಕಾರ್ಯಕ್ಷೇತ್ರದಲ್ಲಿ ವಾತ್ಸಲ್ಯ ಸದಸ್ಯರಾದ ಗೀತಾ ಅವರಿಗೆ ದಿನ ಬಳಕೆಯ ವಸ್ತುಗಳ ವಾತ್ಸಲ್ಯ ಕಿಟ್ ನ್ನು ವಿತರಿಸಲಾಯಿತು.
ಗೀತಾ ಅವರಿಗೆ ಕ್ಷೇತ್ರದಿಂದ ಮಾಶಾಸನವೂ ಕೂಡಾ ನೀಡಲಾಗುತ್ತಿದೆ.
ಈ ಸಂದರ್ಭದಲ್ಲಿ ತಾಲೂಕಿನ ಯೋಜನಾಧಿಕಾರಿ ಬಿ.ಧನಂಜಯ, ಒಕ್ಕೂಟದ ಅಧ್ಯಕ್ಷ ಸುರೇಂದ್ರ ಪೂಜಾರಿ, ಯುವತಿ ಮಂಡಲದ ಅಧ್ಯಕ್ಷೆ ಆಶಾ, ಒಕ್ಕೂಟದ ಪದಾಧಿಕಾರಿಗಳಾದ ಜಯಂತಿ, ಮೋಹಿನಿ, ವಲಯದ ಮೇಲ್ವಿಚಾರಕರಾದ ಚಂದ್ರಹಾಸ, ಜ್ಞಾನ ವಿಕಾಸ ಸಮನ್ವಧಿಕಾರಿ ವಿದ್ಯಾ, ಸೇವಾಪ್ರತಿನಿಧಿ ಉಷಾ ಕಿರಣ ಅವರು ಉಪಸ್ಥಿತರಿದ್ದರು.