ಮಾರೂರು ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಿದ್ಧತಾ ಸಭೆ

ಮಾರೂರು ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಿದ್ಧತಾ ಸಭೆ


ಮೂಡುಬಿದಿರೆ: ಶ್ರೀ ಗೋಪಾಲಕೃಷ್ಣ ಕೊಡಮಣಿತ್ತಾಯ ದೇವಸ್ಥಾನ ಮಾರೂರು ಹೊಸಂಗಡಿ ಇದರ ಬ್ರಹ್ಮಕಲಶೋತ್ಸವದ ಸಿದ್ಧತಾ ಸಭೆಯು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜೀವಂಧರ್ ಕುಮಾರ್ ಅಧ್ಯಕ್ಷತೆಯಲ್ಲಿ ಶನಿವಾರ ಸಂಜೆ ದೇವಸ್ಥಾನದ ಆವರಣದಲ್ಲಿ ನಡೆಯಿತು.

ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಎಪ್ರಿಲ್ 26ರಿಂದ ಮೇ1 ರವರೆಗೆ ನಡೆಯಲಿದ್ದು ಈ ಅವಧಿಯಲ್ಲಿ ಕ್ಷೇತ್ರದಲ್ಲಿ ನಡೆಯುವ ವಿವಿಧ ಧಾಮಿ೯ಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ರೂಪು  ರೇಷೆಗಳ ಬಗ್ಗೆ ಚಚರ್ಿಸಲಾಯಿತು. ಸಭಾ ಕಾರ್ಯಕ್ರಮಕ್ಕೆ ಆಮಂತ್ರಿಸಬೇಕಾದ ಸ್ವಾಮೀಜಿಗಳು, ಧಾಮರ್ಿಕ ಮುಖಂಡರು, ಇತರ ಪ್ರಮುಖರ ಹೆಸರುಗಳನ್ನು ಸಭೆಯಲ್ಲಿ ಪರಿಶೀಲಿಸಲಾಯಿತು. ಹೊರೆಕಾಣಿಕೆ ಹೊರಡುವ ದಿನ ಮತ್ತು ಸ್ಥಳದ ಬಗ್ಗೆ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಲಾಯಿತು. ದಿನಂಪ್ರತಿ ಸೇರುವ ಭಕ್ತರ ಅಂದಾಜು ಸಂಖ್ಯೆ ಮತ್ತು ಊಟೋಪಚಾರ ವ್ಯವಸ್ಥೆಗಳ ಬಗ್ಗೆ ಚಚಿ೯ಸಲಾಯಿತು.  ಬ್ರಹ್ಮಕಲಶೋತ್ಸವ ಯಶಸ್ವಿಗೆ ಈಗಾಗಲೇ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಅದರ ಸದಸ್ಯರು ತಮ್ಮ ಜವಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುವಂತೆ ಸಭೆಯಲ್ಲಿ ತಿಳಿಸಲಾಯಿತು. ದೇವಸ್ಥಾನದ ಅರ್ಚಕರಾದ ವೆಂಕಟರಾಜ್ ಅಸ್ರಣ್ಣರು, ಜೀಣೋ೯ದ್ಧಾರ ಸಮಿತಿ ಕಾಯ೯ಧ್ಯಕ್ಷರಾದ ಶಂಭು ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದಶಿ೯

ರವಿಪ್ರಸಾದ್ ಕೆ. ಶೆಟ್ಟಿ, ಸಮಿತಿ ಪ್ರಮುಖರಾದ ಜಯರಾಜ್ ಬಲ್ಲವ ಸಂಗಡಿಗುತ್ತು,  ತೋಡಾರು ದಿವಾಕರ ಶೆಟ್ಟಿ, ಮಿಥುನ್ ಶೆಟ್ಟಿ ಪಡ್ಯೋಡಿಗುತ್ತು, ಸುನೀಲ್ ಶೆಟ್ಟಿ, ದಿಲೀಪ್ ಕುಮಾರ್ ಶೆಟ್ಟಿ, ಸತೀಶ್ ಶೆಟ್ಟಿ, ಯಶೋಧರ ಮಾರೂರು ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article