ಮೂಡುಬಿದಿರೆ: ವಿವಿಧ ಸಂಘ ಸಂಸ್ಥೆಗಳಿಂದ ಸ್ವಚ್ಛ ಭಾರತ್ ಶ್ರಮದಾನ

ಮೂಡುಬಿದಿರೆ: ವಿವಿಧ ಸಂಘ ಸಂಸ್ಥೆಗಳಿಂದ ಸ್ವಚ್ಛ ಭಾರತ್ ಶ್ರಮದಾನ


ಮೂಡುಬಿದಿರೆ: ವಿಶ್ವಕರ್ಮ ಸಹಕಾರ ಬ್ಯಾಂಕಿನ ಕಾರ್ಕಳ ಶಾಖೆಯ ವತಿಯಿಂದ “ಸ್ವಚ್ಛತಾ ಹೀ ಸೇವಾ” ಎಂಬ ಧ್ಯೇಯದೊಂದಿಗೆ 30ನೇ ಸ್ವಚ್ಛ ಭಾರತ್ ಶ್ರಮದಾನವು ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನ ಪರಿಸರ, ಜೈನಪೇಟೆ ಹಾಗೂ ಆಲಂಗಾರು ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತೆಯ ಜಾಗ್ರತೆ ಮೂಡಿಸುವ ನಿಟ್ಟಿನಲ್ಲಿ ಶ್ರಮಧಾನ ಕಾರ್ಯಕ್ರಮವು ನಡೆಯಿತು. 


ಗುರುಮಠ ಕಾಳಿಕಾಂಬಾ ದೇವಸ್ಥಾನದ ಆಡಳಿತ  ಮುಕ್ತೇಸರರಾದ ಬಾಲಕೃಷ್ಣ ಆಚಾರ್ಯ ಮತ್ತು ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್ ನ ಅಧ್ಯಕ್ಷ ಹರೀಶ್ ಎಂ. ಕೆ. ಅವರು ಹಸಿರು ನಿಶಾನೆಯನ್ನು ತೋರುವ ಮೂಲಕ ಶ್ರಮದಾನಕ್ಕೆ  ಚಾಲನೆಯನ್ನು ನೀಡಿದರು. 


ಬಾಲಕೃಷ್ಣ ಆಚಾರ್ಯ ಅವರು ಭಾಗವಹಿಸಿದ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿ, ವಿಶ್ವಕರ್ಮ ಬ್ಯಾಂಕ್ ಬ್ಯಾಂಕಿಂಗ್ ಚಟುವಟಿಕೆಗಳೊಂದಿಗೆ ಸಮಾಜಮುಖಿಯಾಗಿ ಸ್ವಚ್ಛತಾ ಹೀ ಸೇವಾ ನಂತಹ ಗುರುತರವಾದ ಕಿಷ್ಟಕರ ಕಾರ್ಯವನ್ನು ಸಮಾಜದ ಎಲ್ಲರನ್ನೂ ಸೇರಿಸಿಕೊಂಡು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಹೇಳಿದರು.

ಬ್ಯಾಂಕಿನ ನಿರ್ದೇಶಕರಾದ ಡಿ ಭಾಸ್ಕರ್ ಆಚಾರ್ಯ,  ಬೆಳುವಾಯಿ, ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನಾದ ಪದಾಧಿಕಾರಿಗಳು ಹಾಗೂ ಸದಸ್ಯರು, ಕಾಳಿಕಾಂಬಾ ಸೇವಾ ಸಮಿತಿ ಅಧ್ಯಕ್ಷ ಶ್ರೀನಾಥ್ ಆಚಾರ್ಯ ಹಾಗೂ ಸದಸ್ಯರು, ಕಾಳಿಕಾಂಬಾ ಮಹಿಳಾ ಸಮಿತಿ ಇದರ ಸದಸ್ಯರು, ಗುರು ಕಾಷ್ಠ ಶಿಲ್ಪಕಲಾ ಸಂಘ ಇದರ ಸದಸ್ಯರು,, ಚಿನ್ನದ ಕೆಲಸಗಾರರ ಹಿತರಕ್ಷಣಾ ವೇದಿಕೆ ಇದರ ಸದಸ್ಯರು,, ಕಾಳಿಕಾಂಬಾ ಭಜನಾ ಮಂಡಳಿ, ರೋಟರಿ ಕ್ಲಬ್ ಟೆಂಪಲ್ ಟೌನ್ ಮೂಡಬಿದಿರೆ ಇದರ ಸದಸ್ಯರು,, ಜವನೆರ್ ಬೆದ್ರ ಫೌಂಡೇಶನ್ ಇದರ ಸದಸ್ಯರು, ಮೂಡುಬಿದಿರೆ ಪ್ರೆಸ್ ಕ್ಲಬ್ ನ ಅಧ್ಯಕ್ಷ. ಬಿ. ಸೀತಾರಾಮ ಆಚಾರ್ಯ, ಕಾರ್ಯದರ್ಶಿ ಪ್ರೇಮಶ್ರೀ ಕಲ್ಲಬೆಟ್ಟು ಹಾಗೂ ಸದಸ್ಯರು, ಪ್ರೇರಣಾ ಸೇವಾ ಟ್ರಸ್ಟ್ ಇದರ ಸದಸ್ಯರು ರಾಘವೇಂದ್ರ ಗೇಮ್ಸ್ ಕ್ಲಬ್ ಇದರ ರಾಜೇಶ್ ಆಚಾರ್ಯ, ವಿಶ್ವಕರ್ಮ ಸಹಕಾರ ಬ್ಯಾಂಕಿನ ಕಾರ್ಕಳ ಶಾಖೆಯ ಶಾಖಾಧಿಕಾರಿ ನಿತಿನ್ ಕೆ. ಹಾಗೂ ಸಿಬ್ಬಂದಿಗಳು, ಬ್ಯಾಂಕಿನ ಸದಸ್ಯರು, ಗ್ರಾಹಕರು ಹಾಗೂ ಹೆತೈಷಿಗಳು ಭಾಗವಹಿಸಿ ಶ್ರಮದಾನದಲ್ಲಿ ಕೈ ಜೋಡಿಸಿ ಸಹಕರಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article