ಸಂತ ಫಿಲೋಮಿನಾ ಕಾಲೇಜಿನ ಎನ್‌ಎಸ್‌ಎಸ್‌ನ ವಾರ್ಷಿಕ ವಿಶೇಷ ಶಿಬಿರ ಸಮಾರೋಪ

ಸಂತ ಫಿಲೋಮಿನಾ ಕಾಲೇಜಿನ ಎನ್‌ಎಸ್‌ಎಸ್‌ನ ವಾರ್ಷಿಕ ವಿಶೇಷ ಶಿಬಿರ ಸಮಾರೋಪ


ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಪುತ್ತೂರು ಇದರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ 2025-26 ‘ಡಿಜಿಟಲ್ ಸಾಕ್ಷರತೆಗಾಗಿ ಯುವಜನತೆ-ನನ್ನ ಭಾರತಕ್ಕಾಗಿ ಯುವಜನತೆ’ ಎಂಬ ಧ್ಯೇಯ ವಾಕ್ಯದಡಿಯಲ್ಲಿ ಫೆ.3 ರಿಂದ ಫೆ.9 ರವರೆಗೆ ಸರಕಾರಿ ಪ್ರೌಢ ಶಾಲೆ ಪಾಪೆಮಜಲು ಅರಿಯಡ್ಕ ಇಲ್ಲಿ ನಡೆದು, ಫೆ.9 ರಂದು ಸಮಾಪನಗೊಂಡಿತು.


ಡಾ. ಶೇಷಾಪ್ಪ ಕೆ. ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವ, ಉಪಯೋಗ ಹಾಗೂ ಶಿಬಿರದಿಂದ ಕಲಿಯುವ ಮೌಲ್ಯಗಳನ್ನು ಶಿಬಿರಾರ್ಥಿಗಳಿಗೆ ತಿಳಿಸಿಕೊಟ್ಟರು. 


ನಂತರ ವೇದಿಕೆಯಲ್ಲಿದ್ದ ಗಣ್ಯ ವ್ಯಕ್ತಿಗಳು ಹಿತನುಡಿಗಳನ್ನಾಡಿ ಶುಭ ಹಾರೈಸಿದರು. ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ವಿಶೇಷ ಸಾಧನೆ ಗೈದ ಸ್ವಯಂಸೇವಕರನ್ನು ಗಣ್ಯರು ಗೌರವಿಸಿದರು. ನಂತರ ಶೈಕ್ಷಣಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಮತ್ತು ಉತ್ತಮ ವರದಿ ಬರವಣಿಗೆಗೆ ಬಹುಮಾನ ನೀಡಲಾಯಿತು. 

ವರದಿ ಬರವಣಿಗೆಯ ಬಹುಮಾನವನ್ನು ದ್ವಿತಿ, ಸ್ಪಂದನ, ಕೀರ್ತನಾ, ಅಶ್ವಿನಿ ಇವರು ಪಡೆದುಕೊಂಡರು. ನಂತರ ದಾನಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು ಹಾಗೂ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. 

ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಸರ್ಕಾರಿ ಪ್ರೌಢಶಾಲೆ ಪಾಪೆಮಜಲು ಅರಿಯಡ್ಕ ಇವರಿಗೆ ನೆನಪಿನ ಕಾಣಿಕೆಯಾಗಿ ಕುರ್ಚಿ ನೀಡಲಾಯಿತು. ಸಂಚಾಲಕರಾದ ಅತಿ ವಂದನೀಯ ಲಾರೆನ್ಸ್ ಮಸ್ಕರೇನಸ್ ಇವರು ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. 

ಸಂತ ಫಿಲೋಮಿನಾ ಪಾಲೇಜಿನ ಸಂಚಾಲಕರಾದ ಅತಿ ವಂದನೀಯ ಲಾರೆನ್ಸ್ ಮಸ್ಕರೇನಸ್, ಮಂಗಳೂರು ವಿಶ್ವವಿದ್ಯಾನಿಲಯದ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ. ಶೇಷಾಪ್ಪ, ಉಪ ಪ್ರಾಂಶುಪಾಲ ಡಾ. ವಿಜಯ ಕುಮಾರ್ ಮೊಳೆಯಾರ್, ಮೀನಾಕ್ಷಿ ಪಾಪೆಮಜಲು, ಶ್ರೀಧರ ಪೂಜಾರಿ, ಸಚಿನ್ ಪಾಪೆಮಜಲು, ಮಲ್ಲಿಕಾ ಜೆ ರೈ, ಡಾ ಹಾಜಿ. ಎಸ್ ಅಬೂಬಕ್ಕರ್ ಆರ್ಲಪದವು ಶಶಿಕಲಾ, ಪ್ರವೀಣಾ ಇವರು ಉಪಸ್ಥಿತರಿದ್ದರು. 

ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪುಷ್ಪ ಎನ್. ಸ್ವಾಗತಿಸಿ, ಡಾ. ಕೆ. ಚಂದ್ರಶೇಖರ್ ವಂದಿಸಿದರು. ಶಿಬಿರದ ವರದಿಯನ್ನು ಗೀತಾ ಕೆ.ಬಿ. ಮತ್ತು ರತನ್ ಇವರು ವಾಚಿಸಿದರು. ತಮ್ಮ ಅನುಭವಗಳನ್ನು ಮುಕ್ತವಾಗಿ ತಅಪರ್ಣ ಎಸ್, ಸುಷ್ಮಾ, ರಿಷಿಕಾ, ಮನೀಷ್,ಆಕಾಶ್ ರೈ ಅವರು ತಿಳಿಸಿದರು. 

ವಿಶೇಷ ಸಾಧನೆ ಮಾಡಿದವರ ವರದಿಯನ್ನು ಅಶ್ವಿನಿ ಮತ್ತು ಬಹುಮಾನ ವಿತರಣಾ ಪಟ್ಟಿಯನ್ನು ವಿಷ್ಣುಜೀತ್ ರವರು ವಾಚಿಸಿದರು, ಕಾರ್ಯಕ್ರಮವನ್ನು ಸ್ಪಂದನಾ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article