ಫಿಲೋಮಿನಾ ಎನ್.ಎಸ್.ಎಸ್. ಶಿಬಿರದಲ್ಲಿ ಯಕ್ಷರೂಪಕ ‘ಸುದರ್ಶನ’
Wednesday, February 18, 2026
ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಪುತ್ತೂರು, ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಪಾಪೆಮಜಲು ಪ್ರೌಢಶಾಲೆಯ ಸಾಂಸ್ಕೃತಿಕ ವೇದಿಕೆಯ ಯಕ್ಷಕಲಾ ಕೇಂದ್ರ (ಭಾರತೀಯ ಶಾಸ್ತ್ರೀಯ ಮತ್ತು ಜಾನಪದ ಕಲೆಗಳ ಅಧ್ಯಯನ ಕೇಂದ್ರ) ಪ್ರಸ್ತುತಿಯಲ್ಲಿ ಯಕ್ಷರೂಪಕ ‘ಸುದರ್ಶನ’ ಪ್ರದರ್ಶನಗೊಂಡಿತು.
ಯಕ್ಷಕಲಾ ಕೇಂದ್ರದ ಸಾಂಸ್ಕೃತಿಕ ವಿಸ್ತರಣೆಯ ಯೋಜನೆಯಡಿಯಲ್ಲಿ ವಿದ್ಯಾರ್ಥಿ ಕಲಾವಿದರಿಂದ ಯಕ್ಷರೂಪಕವು ಸಂಪನ್ನಗೊಂಡಿತು.
ಸುದರ್ಶನೊಪಖ್ಯಾನ ಪ್ರಸಂಗದ ‘ಸುದರ್ಶನ’ ಪಾತ್ರ ಚಿತ್ರಣವನ್ನು ವಿದ್ಯಾರ್ಥಿ ಕಲಾವಿದ ಮಿಥುನ್ ಪ್ರೌಢ ಅಭಿನಯದ ಮೂಲಕ ಅಪೂರ್ವವಾಗಿ ಚಿತ್ರಿಸಿದರು.
ಹಾಡುಗಾರಿಕೆಯಲ್ಲಿ ಯಕ್ಷಕಲಾ ನಿರ್ದೇಶಕ ಪ್ರಶಾಂತ್ ರೈ, ಮೃದಂಗದಲ್ಲಿ ಬಾಲಸುಬ್ರಹ್ಮಣ್ಯ, ಚೆಂಡೆಯಲ್ಲಿ ಆಯುಷ್, ವಯಲಿನ್ನಲ್ಲಿ ಮೀಹೀರ್ ಭಟ್ಟ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.
ಪ್ರಾಂಶುಪಾಲರಾದ ರೆ. ಡಾ. ಆಂಟೋನಿ ಪ್ರಕಾಶ್ ಮೊಂತೇರೊ ಅವರ ಪ್ರೋತ್ಸಾಹ ಮತ್ತು ಯೋಜನಾಧಿಕಾರಿಗಳಾದ ಡಾ. ಚಂದ್ರಶೇಖರ ಕೆ. ಮತ್ತು ಪುಷ್ಪ ಎನ್. ಅವರ ಸಹಕಾರದಿಂದ ಕಾರ್ಯಕ್ರಮವು ಯಶಸ್ವಿಯಾಗಿ ಮೂಡಿಬಂತು.
ಹಿರಿಯರಾದ ಅಮ್ಮಣ್ಣ ರೈ ದೇರ್ಲ ಕಲಾವಿದರನ್ನು ಗೌರವಿಸಿದರು. ಸಹಶಿಬಿರಾಧಿಕಾರಿ ಹರ್ಷಿತ್ ಆರ್. ವಂದಿಸಿದರು.ಅರಿಯಡ್ಕ ಗ್ರಾಮದ ಜನತೆ ವಿದ್ಯಾರ್ಥಿ ಕಲಾವಿದರ ಪ್ರದರ್ಶನವನ್ನು ಆನಂದಿಸಿದರು.
