ಆನೆದಾಳಿ ಪ್ರದೇಶಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ
Tuesday, February 17, 2026
ಸುಳ್ಯ: ಸುಳ್ಯ ತಾಲೂಕಿನ ಅರಂತೋಡು ಆಡ್ತಲೆ ಭಾಗದ ವಿವಿಧೆಡೆ ಆನೆ ದಾಳಿಯಿಂದ ಹಾನಿಯಾಗಿರುವ ಕೃಷಿಕರ ತೋಟಗಳಿಗೆ ಹಾಗೂ ಕಿರ್ಲಾಯ ಶಾಲೆಯ ಆವರಣಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಾಡಾನೆ ಹಾವಳಿ ತಡೆಯಲು ಸೋಲಾರ್ ಬೇಲಿ ನಿರ್ಮಾಣ ಸೇರಿದಂತೆ ವಿವಿಧ ಯೋಜನೆಗಳನ್ನು ರೂಪಿಸಬೇಕು ಎಂದು ಸರಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಶಾಸಕರು ಹೇಳಿದರು.
ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಆಡ್ತಲೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ, ಪ್ರಮುಖರಾದ ಶೇಖರ ಚೋಡಿಪಣೆ, ಭಾರತಿ ಉಳುವಾರು, ಬೂತ್ ಸಮಿತಿ ಅಧ್ಯಕ್ಷ ವಿಶ್ವನಾಥ, ಮಣಿಪ್ರಸಾದ, ಎಸಿಎಫ್ ಪ್ರಶಾಂತ್ ಪೈ, ಸಿಬ್ಬಂದಿಗಳಾದ ದೀಪಕ್, ಶಿವಕುಮಾರ್ ಜಿ.ಪಿ. ಜಯಪ್ರಕಾಶ್, ವಿನಾಯಕ್, ಅಭಿಲಾಶ್ ಉಪಸ್ಥಿತರಿದ್ದರು.