ಮಾದಕ ವಸ್ತು ಸಹಿತ ಆರೋಪಿಯ ಸೆರೆ

ಮಾದಕ ವಸ್ತು ಸಹಿತ ಆರೋಪಿಯ ಸೆರೆ


ಉಪ್ಪಿನಂಗಡಿ: ಪಂಜಳ ಪ್ರದೇಶದಲ್ಲಿ ಹಗಲು ಗಸ್ತು ವೇಳೆ ಅನುಮಾನಾಸ್ಪದವಾಗಿ ನಿಂತಿದ್ದ ವ್ಯಕ್ತಿಯಿಂದ ಎಂ.ಡಿ.ಎಂ.ಎ. ಮಾದಕ ವಸ್ತು ಪತ್ತೆಯಾಗಿ, ಪೊಲೀಸರು ಬಂಧಿಸಿದ್ದಾರೆ.

ಮಂಗಳವಾರ (ಸಂಜೆ 6 ಗಂಟೆ ಸುಮಾರಿಗೆ ಹಗಲು ರೌಂಡ್ಸ್ ನಡೆಸುತ್ತಿದ್ದ ಪೊಲೀಸರು ಯಹ್ಯಾ ಕೊಕ್ಕಡ (48) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಆತ ಮಾರಾಟದ ಉದ್ದೇಶದಿಂದ ಎಂ.ಡಿ.ಎಂ.ಎ. ಹೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಜರಿನ ವೇಳೆ 2.16 ಗ್ರಾಂ ಎಂ.ಡಿ.ಎಂ.ಎ. (ಅಂದಾಜು ಮೌಲ್ಯ 3,000), ಒಂದು ಐಫೋನ್ (45,000) ಹಾಗೂ ಒಂದು ಸ್ಯಾಮ್ಸಂಗ್ ಕೀಪ್ಯಾಡ್ ಮೊಬೈಲ್ (1,000) ಸೇರಿ ಒಟ್ಟು 49,000 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ.19/2026ರಡಿ ಎನ್ಡಿಪಿಎಸ್ ಕಾಯ್ದೆಯ ಕಲಂ 8(ಸಿ), 22(ಬಿ) ಅನ್ವಯ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article