ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ


ಮಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ಮಹಿಳಾ ಮೋರ್ಚಾದ ವತಿಯಿಂದ ನಗರದ ಅಟಲ್ ಸೇವಾ ಕೇಂದ್ರದಲ್ಲಿ ವಿಶೇಷ ಕಾರ್ಯಕ್ರಮ ನಡೆಯಿತು.

ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪೂರ್ಣಿಮಾ ಅವರು, ಸಿರಿಧಾನ್ಯ ನಮ್ಮ ಜೀವನದ ಆಹಾರ ಪದ್ಧತಿಯಲ್ಲಿ ಎಷ್ಟು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದರ ಬಗ್ಗೆ ಮಾಹಿತಿ ನೀಡಿದರು. 

ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಲಕಿತಾ ಶೆಟ್ಟಿ ಮಹಿಳಾ ದಿನಾಚರಣೆಯ ಕುರಿತು ಮಾತನಾಡಿದರೆ, ಸಂಧ್ಯಾ ವೆಂಕಟೇಶ್ ಅವರು ಮಹಿಳೆಯರ ಸ್ವರಕ್ಷಣೆ ಮತ್ತು ಕಾನೂನು ಜಾಗೃತಿಯ ಬಗ್ಗೆ ಮಾಹಿತಿ ನೀಡಿದರು. 

ಇದೇ ಸಂದರ್ಭದಲ್ಲಿ ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆದ 33ನೇ ಸಬ್ ಜೂನಿಯರ್ ರಾಷ್ಟ್ರೀಯ ತ್ರೋಬಾಲ್ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡ ಜೂನಿಯರ್ ಹುಡುಗಿಯರ ತಂಡದಲ್ಲಿದ್ದ ಮಂಗಳೂರಿನ ಕೆನರಾ ಸಿಬಿಎಸ್ಇ ಶಾಲೆಯ ವಿದ್ಯಾರ್ಥಿಗಳಾದ ನಿಷ್ಕಾ ರೈ, ವೈಷ್ಣವಿ ಆರ್.ಗುಜರನ್, ರಾಶಿ ಶೆಟ್ಟಿ, ಹಾಗೂ ಹಿರಾಲಿಯವರನ್ನು ಸನ್ಮಾನಿಸಲಾಯಿತು.

ಮಂಡಲದ ಮಹಿಳಾ ಮೋರ್ಚಾ ಅಧ್ಯಕ್ಷೆ ಪೂರ್ಣಿಮಾ ರಾವ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶಬರಿ ಶೆಟ್ಟಿ ನಿರೂಪಿಸಿದರು. 

ಕಮಲಾಕ್ಷಿ ಧನ್ಯವಾದ ಸಮರ್ಪಸಿದರು. ಮಹಿಳಾ ಮೋರ್ಚಾದ ಪದಾಧಿಕಾರಿಗಳಾದ ಲೀಲಾವತಿ ಪ್ರಕಾಶ್, ಯಶೋಧ ಗಟ್ಟಿ, ಗೀತಾ, ವಿದ್ಯಾ ಕುಡ್ವ, ಮಾಲತಿ ಅರುಣ್, ಸವಿತಾ ರೈ, ರೇಷ್ಮಾ ಶೇಟ್, ಭಾಗ್ಯ ಶೇಟ್, ಸೌಮ್ಯ ಆಚಾರ್ಯ, ಅಮಿತಾ, ಜಿಲ್ಲಾ ಮಹಿಳಾ ಮೋರ್ಚಾದ ಸದಸ್ಯೆ ಶ್ರೀಮತಿ ಭವಾನಿ ಮೊದಲಾದವರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article