ಗಲಾಟೆಗೆ ಮಾತ್ರವಲ್ಲ, ಪಾಸ್‌ಪೋರ್ಟ್  ಇತರ ಕಾರ್ಯಗಳಿಗೂ ಪೊಲೀಸ್ ಠಾಣೆಯ ಅಗತ್ಯವಿದೆ: ಯು.ಟಿ. ಖಾದರ್

ಗಲಾಟೆಗೆ ಮಾತ್ರವಲ್ಲ, ಪಾಸ್‌ಪೋರ್ಟ್ ಇತರ ಕಾರ್ಯಗಳಿಗೂ ಪೊಲೀಸ್ ಠಾಣೆಯ ಅಗತ್ಯವಿದೆ: ಯು.ಟಿ. ಖಾದರ್

ಮಂಗಳೂರು: ಉಳ್ಳಾಲ ವಿಧಾನಸಭಾ  ಕ್ಷೇತ್ರ ವಿಂಗಡನೆ ಆದ ಬಳಿಕ ಬಂಟ್ವಾಳ ತಾಲೂಕಿನ ಸಜಿಪ, ಇರಾ, ಚೇಳೂರು, ಕುರ್ನಾಡು ಮೊದಲಾದ ಪೊಲೀಸ್ ಠಾಣೆಯ ಅಗತ್ಯವಿದ್ದ ಹಿನ್ನೆಲೆಯಲ್ಲಿ ಬೇಡಿಕೆ ಇರಿಸಲಾಗಿತ್ತು. ಗಲಾಟೆಗೆ ಮಾತ್ರವಲ್ಲ, ಪಾಸ್‌ಪೋರ್ಟ್  ಸೇರಿದಂತೆ ಇತರ ಕಾರ್ಯಗಳಿಗೂ ಪೊಲೀಸ್ ಠಾಣೆಯ ಅಗತ್ಯವಿದೆ ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ನೇತ್ರಾವತಿ ಹಳೆದಂಡೆಯ ಕಲ್ಲಾಪುವಿನಿಂದ ಸಜಿಪದವರೆಗೆ ನದಿ ಬದಿಯ ರಸ್ತೆ ಕಾಮಗಾರಿಗೆ 10 ಕೋಟಿ ರೂ.ವರೆಗೆ ಕೆಲಸ ಆಗಿದೆ. ಮತ್ತೆ 50 ಕೋಟಿರೂ. ಮಂಜೂರು ಆಗಿದೆ. ಉಳ್ಳಾಲದಲ್ಲಿ ಶ್ರಮಿಕ ಸ್ಕೂಲ್ ಮಂಜೂರು ಆಗಿದೆ. ತಲಾ 60 ಕೋಟಿ ರೂ. ವೆಚ್ಚದಲ್ಲಿ ಕೌಶಲ್ಯಾಭಿವೃದ್ಧಿ ಸೆಂಟರ್ ರಾಜ್ಯಕ್ಕೆ 10 ಮಂಜೂರಾಗಿದ್ದು, ಒಂದು ಜಿಲ್ಲೆಗೆ ಒದಗಿಸಲು ಬೇಡಿಕೆ ಇರಿಸಲಾಗಿದೆ. ಸ್ಥಳಾವಕಾಶ ಇರುವಲ್ಲಿ ಅದನ್ನು ಸ್ಥಾಪಿಸಬೇಕಾಗಿದೆ. ಇದರಿಂದ ಜಿಲ್ಲೆಯ ಯುವಕರಿಗೆ ಇದರಿಂದ ಪ್ರಯೋಜನ ಆಗಲಿದೆ. ಕಲಿಕೆಗೂ ಉದ್ಯೋಗದ ಸಂದರ್ಭ ಪ್ರಾಯೋಗಿಕ ಅನುಭವಕ್ಕೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಇಂಜಿನಿಯರಿಂಗ್ ಶಿಕ್ಷಣ ಪಡೆದ ಶೇ. 30ರಿಂದ 40ರಷ್ಟು ಮಂದಿ ಕೆಲಸವಿಲ್ಲದೆ ಸುತ್ತಾಡುವಂತಾಗಿದೆ. ಆದರೆ ಐಟಿಐ ಕಲಿತವರಲ್ಲಿ ಕೆಲಸವಿಲ್ಲದೆ ಸುತ್ತಾಡುವವರ ಸಂಖ್ಯೆ ಶೇ. 10ರಷ್ಟು. ಹಾಗಾಗಿ ಪ್ರಾಯೋಗಿಕ ಕಲಿಕೆ ಅಗತ್ಯವಾಗಿದೆ. ಅದಕ್ಕಾಗಿ ಈ ಕೌಶಲ್ಯಾಭಿವೃದ್ಧಿ ಸೆಂಟರ್ ಅಗತ್ಯವಾಗಿದೆ. ಕರಾವಳಿಗೆ ಅಗತ್ಯವಾದ ಯಾವುದೇ ಕೊಟ್ಟಿಲ್ಲ ಎಂಬ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲಿ. ಪೂರಕ ಬಜೆಟ್‌ನಲ್ಲಿ ಈ ಬಗ್ಗೆ ಗಮನ ಹರಿಸುವ ಸಾಧ್ಯತೆ ಇದೆ ಎಂದು ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು. 

ಜಯದೇವ ಮತ್ತು ಕಿದ್ವಾಯಿ ಆಸ್ಪತ್ರೆಗಳ ಘಟಕ ಮಂಗಳೂರಿನಲ್ಲಿ ಸ್ಥಾಪಿಸಬೇಕೆಂಬ ಬೇಡಿಕೆ ಬಜೆಟ್‌ನಲ್ಲಿ ಈಡೇರಿಕೆಯಾಗಿಲ್ಲ. ಅದಕ್ಕಾಗಿ ನಿಮ್ಮ ಬೇಡಿಕೆ ಏನು ಎಂಬ ಪ್ರಶ್ನೆಗೆ, ಕೇಳಿದ್ದೆವು. ಆದರೆ ಆಗಿಲ್ಲ. ಸಂಬಂಧಪಟ್ಟ ಸಚಿವರನ್ನು ಈ ಬಗ್ಗೆ ಕೇಳುತ್ತೇವೆ ಎಂದರು.

ಪುತ್ತೂರು ಮೆಡಿಕಲ್ ಕಾಲೇಜು ಸ್ಥಾಪನೆಗೆ ಸಂಬಂಧಿಸಿ ಕಳೆದ ಬಜೆಟ್‌ನಲ್ಲಿ ಘೋಷಣೆಯಾಗಿತ್ತು. ಈ ಬಜೆಟ್‌ನಲ್ಲಿ ಅದಕ್ಕೆ ಪೂರಕವಾಗಿ 300 ಹಾಸಿಗೆಗಳ ಆಸ್ಪತ್ರೆಗೆ ಅನುಮೋದನೆಯಾಗಿದೆ. ಸಂಬಂಧಪಟ್ಟ ಇಲಾಖೆಯವರು ಈ ಬಗ್ಗೆ ರೂಪುರೇಷೆ ಮಾಡಿ, ಅಗತ್ಯ ಹಣಕಾಸಿನ ಬೇಡಿಕೆಯನ್ನು ಹಣಕಾಸು ಇಲಾಖೆಗೆ ಸಲ್ಲಿಸಲಿದ್ದಾರೆ. ಅಲ್ಲಿ ಮಂಜೂರಾತಿ ದೊರಕಿದ ಬಳಿಕ ಪ್ರಕ್ರಿಯೆ ಆರಂಭಗೊಳ್ಳಲಿದೆ. ಸ್ಥಳೀಯ ಶಾಸಕರು ಈ ಬಗ್ಗೆ ಸಾಕಷ್ಟು ಪ್ರಯತ್ನಿಸಿದ್ದು, ಅವರಿಗೆ ನಮ್ಮ ಬೆಂಬಲವಿದೆ ಎಂದು ಹೇಳಿದರು.

ಗಲ್ಫ್ ರಾಷ್ಟ್ರಗಳಿಗೆ ತೆರಳಿದವರು ಸಂಕಷ್ಟದಲ್ಲಿರುವ ಕುರಿತಾದ ಪ್ರಶ್ನೆಗೆ, ಸಾಕಷ್ಟು ಮಂದಿ ಸಮಸ್ಯೆಗೆ ಸಿಲುಕಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಸಮನ್ವಯ ತಂಡವನ್ನು ರಚಿಸಿಕೊಂಡು ಪರಿಸ್ಥಿತಿ ನಿಭಾಯಿಸುವ ವ್ಯವಸ್ಥೆ ಆಗುತ್ತಿದೆ. ಜಿಲ್ಲಾ ಮಟ್ಟದಲ್ಲಿಯೂ ಆನ್ಲೈನ್ ವ್ಯವಸ್ಥೆ ಮೂಲಕ ಸಂಬಂಧಿಕರು ಮಾಹಿತಿ ನೀಡುವಂತೆ ತಿಳಿಸಲಾಗಿದೆ. ಇವೆಲ್ಲವನ್ನೂ ಕ್ರೋಢೀಕರಿಸಿಕೊಂಡು ಕ್ರಮ ಆಗಲಿದೆ ಎಂದು ತಿಳಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article