ಸಾವಿರ ಕಂಬದ ಬಸದಿಯಲ್ಲಿ ಏ.2,3 ರಂದು ರಥೋತ್ಸವ
Tuesday, March 31, 2026
ಮೂಡುಬಿದಿರೆ: ಶ್ರೀ ಜೈನಮಠದ ಅಧೀನದಲ್ಲಿರುವ ತ್ರಿಭುವನ ತಿಲಕ ಚೂಡಾಮಣಿ (ಸಾವಿರ ಕಂಬದ ಬಸದಿ) ಬಸದಿಯಲ್ಲಿ ಭಗವಾನ್ ಶ್ರೀ 1008 ಮಹಾವೀರ ಸ್ವಾಮಿಯ 2625ನೇ ಜನ್ಮಕಲ್ಯಾಣ ಹಾಗೂ ಹಿರಿಯ-ಕಿರಿಯ ರಥೋತ್ಸವದ ಧಾರ್ಮಿಕ ವಿಧಿವಿಧಾನಗಳು ಪ್ರಾರಂಭಗೊಂಡಿದ್ದು, ಏಪ್ರಿಲ್ 3ರವರೆಗೆ ನಡೆಯಲಿವೆ.
ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಮಾರ್ಗದರ್ಶನಲ್ಲಿ ಏ.2ರಂದು ಮಹಾವೀರ ಜಯಂತಿ ಹಾಗೂ ಕಿರಿಯ ರಥೋತ್ಸವ ನಡೆಯಲಿದೆ. ಏ.3ರಂದು ಶ್ರಮಣ ಸಂಸ್ಕೃತಿ ಸಮ್ಮೇಳನ ಹಾಗೂ ಹಿರಿಯ ರಥೋತ್ಸವ ನಡೆಯಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.