ಏಪ್ರಿಲ್ 5 ರಂದು ಮೂಡುಬಿದಿರೆಯಲ್ಲಿ ಉಚಿತ ಶ್ರವಣ ತಪಾಸಣಾ ಶಿಬಿರ

ಏಪ್ರಿಲ್ 5 ರಂದು ಮೂಡುಬಿದಿರೆಯಲ್ಲಿ ಉಚಿತ ಶ್ರವಣ ತಪಾಸಣಾ ಶಿಬಿರ

ಮೂಡುಬಿದಿರೆ: ವರ್ಷ ಕ್ರಿಯೇಷನ್ಸ್ ಪ್ರಸುತಿಯ ಯಶ ಕರ್ನಾಟಕ ವಾರಪತ್ರಿಕೆ ಮತ್ತು ವಿಕಾಸ ಸಮಾನ ಮನಸ್ಕ ಮಾಧ್ಯಮ ಮಿತ್ರರ ವೇದಿಕೆ ನೇತೃತ್ವದಲ್ಲಿ, ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್ ಹಾಗೂ ಕೀರ್ತಿನಗರ ಅಭಿವೃದ್ಧಿ ಸಮಿತಿ ಸಹಕಾರದೊಂದಿಗೆ ಟೀಂ ಈಶ್ವರ ಮಲೆ ಸಹಯೋಗದೊಂದಿಗೆ ಉಚಿತ ಕಿವಿಯ ಶ್ರವಣ ತಪಾಸಣೆ ಹಾಗೂ ಶ್ರವಣ ಯಂತ್ರಕ್ಕೆ ಸಹಾಯಧನ ವಿತರಣೆ ಕಾರ್ಯಕ್ರಮ ಏಪ್ರಿಲ್ 5 ಆದಿತ್ಯವಾರ ಮೂಡುಬಿದಿರೆ ಕೋಡಂಗಲ್ಲು ಸಮೀಪದ ಕೀರ್ತಿನಗರದಲ್ಲಿರುವ ರೋಟರಿ ಟೆಂಪಲ್ ಟೌನ್ ಆಡಿಟೋರಿಯಂನಲ್ಲಿ ಏರ್ಪಡಿಸಲಾಗಿದೆ.

ಸಾಮಾಜಿಕ ಕಾರ್ಯಕರ್ತ ಈಶ್ವರ ಮಲ್ಪೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶ್ರವಣ ತಜ್ಞರಾದ ಡಾ.ಅಂಕಿತಾ ಕಲ್ಮಾಡಿ ಮಾಹಿತಿ ಮಾರ್ಗದರ್ಶನ ನೀಡಲಿದ್ದಾರೆ.

ಅಧ್ಯಕ್ಷತೆಯನ್ನು ವಿಕಾಸ ಸಮಾನ ಮನಸ್ಕ ಮಾಧ್ಯಮ ವೇದಿಕೆಯ ರಾಜ್ಯ ಉಪಾಧ್ಯಕ್ಷ ಮಂದಾರ ರಾಜೇಶ್ ಭಟ್ ವಹಿಸಲಿದ್ದಾರೆ. ರೋಟರಿ ಕ್ಲಬ್ ಆಫ್ ಟೆಂಪಲ್ ಟೌನ್ ಅಧ್ಯಕ್ಷ ಹರೀಶ್ ಎಂ.ಕೆ, ಕೀರ್ತಿನಗರ ಅಭಿವೃದ್ಧಿ ಸಮಿತಿ ಅಧ್ಯಕ್ಷ ಉದಯ ಕುಮಾರ್, ಯಶಕರ್ನಾಟಕ ಪತ್ರಿಕೆಯ ಸಂಪಾದಕ ಪದ್ಮನಾಭ ಗಟ್ಟಿ, ಟೀಂ ಈಶ್ವರ ಮಲ್ಪೆ ಇದರ ಸಂಚಾಲಕ ಲವ ಬಂಗೇರ ಅತಿಥಿಗಳಾಗಿ ಪಾಲ್ಗೊಳ್ಳುವರು.

ಕೀರ್ತಿನಗರ ಹಾಗೂ ಮೂಡುಬಿದಿರೆಯ ನಾಗರೀಕರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕೆಂದು ವರ್ಷ ಕ್ರಿಯೇಷನ್ಸ್ ಭಾರತ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರೀಶ್ ಕೆ.ಆದೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಸಕ್ತರು 8951804399 ಸಂಖ್ಯೆಯ ಕರೆಮಾಡಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಮೊದಲು ನೋಂದಾವಣೆ ಮಾಡಿಕೊಂಡ 30 ಮಂದಿಗೆ ಅವಕಾಶ ನೀಡಲಾಗುತ್ತದೆ. ನುರಿತ ವೈದ್ಯರಿಂದ ತಪಾಸಣೆ ನಡೆಯಲಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article