ಅಳಿಯೂರು ಸರಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ದಿನ ಆಚರಣೆ
ಸರ್ ಸಿ.ವಿ. ರಾಮನ್ ಅವರು ಬೆಳಗಿನ ಚದುರುವಿಕೆ ರಾಮನ್ ಪರಿಣಾಮದ ಕುರಿತು ನೋಬೆಲ್ ಪ್ರಶಸ್ತಿಯನ್ನು ಪಡೆದ ಈ ದಿನವನ್ನು ಸಿವಿ ರಾಮನ್ ಅವರ ಭಾವಚಿತ್ರವನ್ನು ರಂಗೋಲಿಯಲ್ಲಿ ಅನಾವರಣ ಗೊಳಿಸಿ ಐಇಆ ಬಲ್ಬ್ ಬೆಳಗುವುದರ ಮೂಲಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರವೀಂದ್ರ ಅವರು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಗಣಿತ ಶಿಕ್ಷಕಿ ವಿದ್ಯಾ ಸಂದೀಪ್ ನಾಯಕ ಮತ್ತು ಆನಿ ಡಿಂಪಲ್ ಕ್ಯಾಸ್ತಲಿನೋ ಅವರು ಆಯೋಜಿಸಿದ ಗಣಿತ ರಂಗೋಲಿ ಸ್ಪರ್ಧೆಯಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ವಿವಿಧ ಗಣಿತದ ಮಾದರಿ ಚಿನ್ಹೆ ಇತ್ಯಾದಿ ಗಣಿತಕ್ಕೆ ಸಂಬಂಧಿಸಿದ ಚಿತ್ರಗಳನ್ನು ಕಲಾತ್ಮಕವಾಗಿ ಸೃಜನಶೀಲರಾಗಿ ಬಿಡಿಸಿದ ರಂಗೋಲಿಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದುವು.
ಸಮೀಪದ ಪ್ರಾಥಮಿಕ ಶಾಲೆ ಅಳಿಯೂರು ಮತ್ತು ಬೋರುಗುಡ್ಡೆಯಿಂದ 5,6,7ನೇ ತರಗತಿಯ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಆಗಮಿಸಿ ಗಣಿತ ರಂಗೋಲಿ, ಮಾದರಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಚಿತ್ರಕಲಾ ಶಿಕ್ಷಕಿ ರಂಜನಾ ಕುಮಾರಿ ಅವರು ರಚಿಸಿದ ಕ್ರಿಯಾತ್ಮಕ ರಂಗೋಲಿ ಸಿ.ವಿ. ರಾಮನ್ ಭಾವಚಿತ್ರ ಎಲ್ಲರ ಮೆಚ್ಚುಗೆಯನ್ನು ಗಳಿಸಿದ್ದು ವಿಶೇಷವಾಗಿತ್ತು.
ಮಕ್ಕಳಿಗೆ ವಿಜ್ಞಾನ ದಿನದ ಪ್ರಮಾಣವಚನವನ್ನು ವಿಜ್ಞಾನ ಶಿಕ್ಷಕಿ ಮಂಜುಳಾ ಬೋಧಿಸಿದರು. ಶಾಲೆಯ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು.
