ಶ್ರೀ ಮಹಾವೀರ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಣೆ
ಕಾಲೇಜಿನ ಲೇಡಿ ಸ್ಟೂಡೆಂಟ್ಸ್ ಅಸೋಸಿಯೇಶನ್ (ವಿದ್ಯಾರ್ಥಿನಿಯರ ಸಂಘ), ಎನ್.ಎಸ್.ಎಸ್ ಮತ್ತು ಐಕ್ಯೂಎಸಿಗಳ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಳ್ವಾಸ್ ಮೆಡಿಕಲ್ ಕಾಲೇಜಿನ ಮೆಡಿಕಲ್ ಸೂಪರಿಟೆಂಡೆಂಟ್, ಪ್ರಾಧ್ಯಾಪಕರು ಹಾಗೂ ಕಾಯಚಿಕಿತ್ಸಾ ವಿಭಾಗ ಮುಖ್ಯಸ್ಥರು ಆಗಿರುವ ಡಾ. ಸುರೇಖಾ ಪೈ ಅವರು ಭಾಗವಹಿಸಿ ಮಾತನಾಡಿ “ಸಮಾಜದ ಏಳಿಗೆಗೆ ಪುರುಷ ಮತ್ತು ಮಹಿಳೆಯರ ಸಹಭಾಗಿತ್ವ ಅಗತ್ಯ. ಮನೆಯ ಒಳ ಹೊರಗಿನ ಕೆಲಸವನ್ನು ಪತಿ-ಪತ್ನಿಯರು ಹಂಚಿಕೊಂಡು ಮಾಡಬೇಕು. ಹೆಣ್ಣುಮಕ್ಕಳ ಸಾಧನೆಗೆ ಕುಟುಂಬದ ಇತರ ಮಹಿಳಾ ಮತ್ತು ಪುರುಷ ಸದಸ್ಯರ ಬೆಂಬಲ ಇರಬೇಕು. ಅನಾರೋಗ್ಯದಿಂದಾಗುವ ಚಿಕಿತ್ಸಾ ವೆಚ್ಚ ಉಳಿಸಲು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಮಲಗುವ ಮೊದಲು ಮೊಬೈಲ್ ನೋಡುವುದನ್ನು ಕಡಿಮೆ ಮಾಡಿ” ಎಂದರು.
ವಿವಿಧ ಕ್ಷೇತ್ರಗಳ ಮಹಿಳಾ ಸಾಧಕರನ್ನು ರಸಪ್ರಶ್ನೆಯ ಮೂಲಕ ಪರಿಚಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಮಾತನಾಡಿ “ಮಹಿಳಾ ಸಬಲೀಕರಣ ನಮ್ಮ ಧ್ಯೇಯವಾಗಬೇಕು. ಮಹಾವೀರ ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮಹತ್ತರ ಸಾಧನೆಗಳನ್ನು ಮಾಡಿದ್ದಾರೆ. ಅತಿಥಿಗಳ ಮಾತಿನಂತೆ ಇಂದಿನ ವಿದ್ಯಾರ್ಥಿಗಳೂ ನಿಮ್ಮ ಗುರಿ ಸ್ಪಷ್ಟಪಡಿಸಿಕೊಳ್ಳಿ. ಮತ್ತರ ಸಾಧನೆಗಳನ್ನು ಮಾಡಿ” ಎಂದು ಸಂಪನ್ಮೂಲ ವ್ಯಕ್ತಿಯಾದ ಡಾ. ಸುರೇಖಾ ಪೈ ಅವರ ಭಾಷಣಕ್ಕಾಗಿ ಅವರನ್ನು ಅಭಿನಂದಿಸಿದರು.
ವೇದಿಕೆಯಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಹಾಗೂ ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ವಿಜಯಲಕ್ಷ್ಮೀ ವಿದ್ಯಾರ್ಥಿ ಕ್ಶೇಮಪಾಲನಾಧಿಕಾರಿ ಪ್ರೊ. ಹರೀಶ್, ಲೇಡಿ ಸ್ಟೂಡೆಂಟ್ಸ್ ಅಸೋಸಿಯೇಶನ್‌ನ ಸಂಯೋಜಕರಾದ ಪೂರ್ಣಿಮಾ, ಎನ್.ಎಸ್.ಎಸ್ ಅಧಿಕಾರಿ ಶಾರದಾ ಎ., ವಿದ್ಯಾರ್ಥಿ ನಾಯಕಿ ಸಾಕ್ಷಿ ಶೆಟ್ಟಿ ಇವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಂತಿಮ ಬಿ.ಕಾಂ. ವಿದ್ಯಾರ್ಥಿನಿ ನವ್ಯಾ ನಿರೂಪಿಸಿ ವಂದಿಸಿದರು.