ಹೆಣ್ಣಿಗೆ ತನ್ನ ಮತ್ತು ತಾನು ಮಾಡುವ ಕೆಲಸದ ಬಗ್ಗೆ ಗೌರವ, ಪ್ರೀತಿ ಇರಬೇಕು: ಡಾ. ಸುಲತಾ ಹೆಗ್ಡೆ

ಹೆಣ್ಣಿಗೆ ತನ್ನ ಮತ್ತು ತಾನು ಮಾಡುವ ಕೆಲಸದ ಬಗ್ಗೆ ಗೌರವ, ಪ್ರೀತಿ ಇರಬೇಕು: ಡಾ. ಸುಲತಾ ಹೆಗ್ಡೆ


ಮೂಡುಬಿದಿರೆ: ಪ್ರತಿಯೊಬ್ಬ ಹೆಣ್ಣಿನಲ್ಲೂ ಶಕ್ತಿ ಮತ್ತು ಆತ್ಮವಿಶ್ವಾಸವಿದೆ ಎಂಬುದನ್ನು  ಅರಿತುಕೊಂಡು ಆಕೆ ಬದುಕುಬೇಕು. ಹೆಣ್ಣಿಗೆ ತನ್ನ ಬಗ್ಗೆ ಗೌರವ ಹಾಗೂ ತಾನು ಮಾಡುವ ಕೆಲಸದ ಬಗ್ಗೆ ಪ್ರೀತಿ ಇರಬೇಕು  ಎಂದು ಆಳ್ವಾಸ್ ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ.ಸುಲತಾ ಹೆಗ್ಡೆ ಹೆಬ್ರಿ ಹೇಳಿದರು.


ಅವರು ದಕ್ಷಿಣ ಕನ್ನಡ ಜಿಲ್ಲಾ ಹೆಗ್ಗಡೆ  ಮಹಿಳಾ ಘಟಕದ ವತಿಯಿಂದ  ಕೋಟೆಬಾಗಿಲು ವೀರಮಾರುತಿ ಸಭಾಭವನದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.  ಮೊದಲು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. 

ನಿವೃತ್ತ ಶಿಕ್ಷಕರಾದ ಶೀಲಾ ಎಸ್. ಹೆಗ್ಡೆ, ಪ್ರಭಾವತಿ ಎ. ಹೆಗ್ಡೆ, ಜಯಮ್ಮ ಎಸ್.ಹೆಗ್ಡೆ, ಸರಸ್ವತಿ ಹೆಗ್ಡೆ, ಮಿತ್ರಪ್ರಭಾ ಹೆಗ್ಡೆ, ವಿಜಯಲಕ್ಷ್ಮೀ ಹೆಗ್ಡೆ,  ಗಿರಿಜ ಎಸ್. ಹೆಗ್ಡೆ, ನಿವೃತ್ತ ಬ್ಯಾಂಕ್ ಅಧಿಕಾರಿ ಲೀಲಾವತಿ ಹೆಗ್ಡೆ, ಅಟೋ ಚಾಲಕರಾಗಿರುವ ಅರುಣ ಹೆಗ್ಡೆ,  ಮಹಿಳಾ ಘಟಕದ ಸ್ಥಾಪಕ ಅಧ್ಯಕ್ಷೆ ನಳಿನಿ ಆರ್. ಹೆಗ್ಡೆ, ಕಾರ್ಯದರ್ಶಿ ಅಪರ್ಣಾ ಪಿ.ಹೆಗ್ಡೆ, ಖಜಾಂಜಿ ಲತಾ ಯು. ಹೆಗ್ಡೆ ಹಾಗೂ ನಂತರದ ವಿವಿಧ  ಅವಧಿಯ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. 

ವಿಜಯ ಯು. ಹೆಗ್ಡೆ, ಸಂಧ್ಯಾ ಎಸ್.ಹೆಗ್ಡೆ, ಶೀಲಾ ಎಸ್. ಹೆಗ್ಡೆ, ಸುಶೀಲ ಹೆಗ್ಡೆ ಮತ್ತು ಯಶೋಧ ಹೆಗ್ಡೆ  ಕವನ ವಾಚಿಸಿದರು.

ಜಿಲ್ಲಾ ಹೆಗ್ಗಡೆ ಸಮಾಜ ಸಂಘದ ಅಧ್ಯಕ್ಷ ಪ್ರಭಾಕರ ಹೆಗ್ಡೆ ಅಧ್ಯಕ್ಷತೆ ವಹಿಸಿದರು.

 ವೀರಮಾರುತಿ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ಯಾಮ ಹೆಗ್ಡೆ, ಕನ್ನಡಿಗ ಕಲಾವಿದರ ಪರಿಷತ್ ಮಹಾರಾಷ್ಟç ಇದರ ಅಧ್ಯಕ್ಷ ಡಾ.ಸುರೇಂದ್ರ ಕುಮಾರ್ ಹೆಗ್ಡೆ, ಜಿಲ್ಲಾ ಹೆಗ್ಗಡೆ ಸಮಾಜ ಸಂಘದ ನಿಕಟಪೂರ್ವ ಅಧ್ಯಕ್ಷ ನವೀನ್ ಹೆಗ್ಡೆ, ದೇವಸ್ಥಾನದ ನಿಕಟಪೂರ್ವ ಆಡಳಿತ ಮೊಕ್ತೇಸರ ಉದಯ ಕುಮಾರ್ ಹೆಗ್ಡೆ, ಉದ್ಯಮಿ ಪ್ರವೀಣ್ ಹೆಗ್ಡೆ ಹೆಬ್ರಿ, ಜಿಲ್ಲಾ ಹೆಗ್ಗಡೆ  ಮಹಿಳಾ ಘಟಕದ ಕಾರ್ಯದರ್ಶಿ ಲತಾ ಯು. ಹೆಗ್ಡೆ, ಜಿಲ್ಲಾ ಯುವ ಘಟಕದ ಕರ‍್ಯದರ್ಶಿ ನೀರಜ್ ಹೆಗ್ಡೆ, ಕಾರ್ಕಳ ವಲಯ ಮಹಿಳಾ ಘಟಕದ ಅಧ್ಯಕ್ಷೆ ಶಾಂತಾ ಎಸ್. ಹೆಗ್ಡೆ, ವೇಣೂರು ವಲಯ ಅಧ್ಯಕ್ಷೆ ಸುಭಾಷಿಣಿ ವಿ. ಹೆಗ್ಡೆ, ನಾರಾವಿ ವಲಯ ಅಧ್ಯಕ್ಷೆ ನವ್ಯಾ ಪ್ರವೀಣ್ ಹೆಗ್ಡೆ ಮತ್ತಿತರರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. 

ಶೈಲಜಾ ಹೆಗ್ಡೆ ಸ್ವಾಗತಿಸಿದರು. ಚೇತನಾ ಆರ್.ಹೆಗ್ಡೆ ನಿರೂಪಿಸಿದರು. ಶಕಿಲಾ ಹೆಗ್ಡೆ ವಂದಿಸಿದರು. 

ಸಭಾ ಕಾರ್ಯಕ್ರಮದ ಬಳಿಕ ಮಹಿಳಾ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article