ಖಾಸಗಿ ಬಸ್-ಬೈಕ್ ಢಿಕ್ಕಿ: ಎಂಜಿನಿಯರಿಂಗ್ ವಿದ್ಯಾಥಿ೯ ಮೃತ್ಯು

ಖಾಸಗಿ ಬಸ್-ಬೈಕ್ ಢಿಕ್ಕಿ: ಎಂಜಿನಿಯರಿಂಗ್ ವಿದ್ಯಾಥಿ೯ ಮೃತ್ಯು


ಮೂಡುಬಿದಿರೆ: ಶನಿವಾರ ಸಂಜೆ ಪುತ್ತಿಗೆ ಗ್ರಾಮಪಂಚಾಯತ್ ವ್ಯಾಪ್ತಿಯ ಹಂಡೇಲುಸುತ್ತು ಬಳಿ ಖಾಸಗಿ ಬಸ್ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿ ಮೈಸೂರು ಮೂಲದ ಸಮೃದ್ಧ್ ಮೃತಪಟ್ಟ ವರು. ಸಮೃದ್ಧ ಅವರು ತಮ್ಮ ಸಹಪಾಠಿ ಬೆಳ್ತಂಗಡಿ ಮೂಲದ ನಿಶಾಂತ್ ಅವರೊಂದಿಗೆ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿದ್ದ ಕ್ರೀಡಾಕೂಟದಿಂದ ಮರಳಿ ಮಿಜಾರ್‌ನಲ್ಲಿರುವ ತಮ್ಮ ಹಾಸ್ಟೆಲಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ಸಂದಭ೯ ಮಂಗಳೂರು ಕಡೆಯಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ವಿದ್ಯಾಗಿರಿ ಸಮೀಪದ ಹಂಡೇಲುಸುತ್ತಿನಲ್ಲಿ ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಸಮೃದ್ಧ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ಅಪಘಾತದಲ್ಲಿ ನಿಶಾಂತ್ ಅವರ ಭುಜಕ್ಕೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

 ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article