ಮೂಡುಬಿದಿರೆ: ಪವರ್ ಫ್ರೆಂಡ್ಸ್ ಬೆದ್ರದಿಂದ ಯುಗಾದಿ ಸಂಭ್ರಮ: ಬೇವು-ಬೆಲ್ಲ ವಿತರಣೆ

ಮೂಡುಬಿದಿರೆ: ಪವರ್ ಫ್ರೆಂಡ್ಸ್ ಬೆದ್ರದಿಂದ ಯುಗಾದಿ ಸಂಭ್ರಮ: ಬೇವು-ಬೆಲ್ಲ ವಿತರಣೆ


ಮೂಡುಬಿದಿರೆ: ಯುಗಾದಿ ಹಬ್ಬದ ಪ್ರಯುಕ್ತ ಪವರ್ ಫ್ರೆಂಡ್ಸ್ ಬೆದ್ರ ವತಿಯಿಂದ ಬಸ್ ನಿಲ್ದಾಣದಲ್ಲಿ ಸಾವ೯ಜನಿಕರಿಗೆ ಬೇವು-ಬೆಲ್ಲ, ಪಾಯಸ ವಿತರಿಸಲಾಯಿತು. 

ಉದ್ಯಮಿ ಕೆ. ಶ್ರೀಪತಿ ಭಟ್ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾಯ೯ಕ್ರಮದಲ್ಲಿ ನಿವೃತ್ತ ಹಿರಿಯ ಆರೋಗ್ಯ ಕಾಯ೯ಕತೆ೯ ಲೀಲಾ ಕೆ., ಆರೋಗ್ಯ ಸುರಕ್ಷಾಧಿಕಾರಿ ಸುನಂದ, ಬೋರಮ್ಮ, ಆರೋಗ್ಯ ಸಹಾಯಕಿ ಗಿರಿಜಾ ಎಂ, ನಿವೃತ್ತ ಕಿರಿಯ ಆರೋಗ್ಯಾಧಿಕಾರಿ ಶಾರದಾ ರಾವ್ ಹಾಗೂ ಹಿರಿಯ ಬಸ್ ಏಜೆಂಟ್ ಶಶಿಕುಮಾರ್ ಅವರನ್ನು ಸನ್ಮಾನಿಸಲಾಯಿತು. 


ರಾಜಾರಾಮ್ ನಾಗರಕಟ್ಟೆ ಯುಗಾದಿಯ ಮಹತ್ವವನ್ನು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದಶ೯ನ್  ಎಂ, ನ್ಯಾಯವಾದಿ ಶರತ್ ಶೆಟ್ಟಿ, ಪ್ರೆಸ್ ಕ್ಲಬ್ ಅಧ್ಯಕ್ಷ ಬಿ. ಸೀತಾರಾಮ ಆಚಾರ್ಯ, ಉದ್ಯಮಿಗಳಾದ ಕುಮಾರ್ ಪೂಜಾರಿ, ರೋಟರಿ ಟೆಂಪಲ್ ಟೌನ್ ಅಧ್ಯಕ್ಷ ಹರೀಶ್ ಎಂ. ಕೆ, ಭಾಗವಹಿಸಿ ಶುಭ ಹಾರೈಸಿದರು.

ಪವರ್ ಫ್ರೆಂಡ್ಸ್ ಬೆದ್ರ ಅಧ್ಯಕ್ಷ ವಿನಯ್ ಪ್ರಸಾದ್, ಮಹಿಳಾ ಘಟಕದ ಅಧ್ಯಕ್ಷೆ ರಮಾ ಹಾಗೂ ಪ್ರಮುಖರಾದ ಲತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗುರುಪ್ರಸಾದ್ ಸ್ವಾಗತಿಸಿದರು. ಶಂಕರ್ ಕೋಟ್ಯಾನ್ ಕಾಯ೯ಕ್ರಮ ನಿರೂಪಿಸಿದರು. ಕಾಯ೯ದಶಿ೯ ಸುಧಾಕರ್ ಬೆದ್ರ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article