ಫ್ರೆಂಡ್ಸ್ ಕ್ಲಬ್ ಇರುವೈಲು ಕಟ್ಟಡ ನಿರ್ಮಾಣಕ್ಕೆ ಧರ್ಮಸ್ಥಳ ಯೋಜನೆಯಿಂದ 1 ಲಕ್ಷ ರೂ. ಅನುದಾನ

ಫ್ರೆಂಡ್ಸ್ ಕ್ಲಬ್ ಇರುವೈಲು ಕಟ್ಟಡ ನಿರ್ಮಾಣಕ್ಕೆ ಧರ್ಮಸ್ಥಳ ಯೋಜನೆಯಿಂದ 1 ಲಕ್ಷ ರೂ. ಅನುದಾನ


ಮೂಡುಬಿದಿರೆ: ಫ್ರೆಂಡ್ಸ್ ಕ್ಲಬ್ ಇರುವೈಲು ಇದರ ಕಟ್ಟಡ ನಿರ್ಮಾಣಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ರೂ. 1,00,000 ಅನುದಾನ ಮಂಜೂರಾಗಿದ್ದು, ಮಂಜೂರಾತಿ ಪತ್ರವನ್ನು ಯೋಜನಾಧಿಕಾರಿ ಬಿ. ಧನಂಜಯ ಅವರು ಶುಕ್ರವಾರ ಫ್ರೆಂಡ್ಸ್ ಕ್ಲಬ್ ಕಟ್ಟಡ ಮುಂಭಾಗದಲ್ಲಿ ವಿತರಿಸಿದರು.

ಈ ಸಂದರ್ಭದಲ್ಲಿ ಪುತ್ತಿಗೆ ವಲಯದ ದಯಾನಂದ ಬಂಗೇರ,  ದಿನೇಶ್ ಪ್ರಭು,  ಯಶೋಧರ, ಶಿವಾನಂದ ನಾಯ್ಕ್, ಪುತ್ತಿಗೆ ವಲಯದ ಭಜನಾ ಪರಿಷತ್ ಅಧ್ಯಕ್ಷೆ ನಿಶಾ ಇರುವೈಲು, ತರುಣ್, ಪ್ರವೀಣ್ ಪೂಜಾರಿ , ಒಕ್ಕೂಟದ ಪದಾಧಿಕಾರಿಗಳಾದ ಪ್ರಮೀಳಾ ರಾಜೇಶ್, ದೀಪಾ ದಿನೇಶ್ ಬಟಾರ, ಪ್ರಮೀಳಾ ಲಕ್ಷ್ಮಣ್, ಪುತ್ತಿಗೆ ವಲಯದ ಮೇಲ್ವಿಚಾರಕ ಕೃಷ್ಣಪ್ಪ ಎಂ, ಸೇವಾ ಪ್ರತಿನಿಧಿಗಳಾದ ಪ್ರತಿಭಾ ಶೆಟ್ಟಿ ಮತ್ತು ಸುರೇಖಾ ಶೆಟ್ಟಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article