ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ಹೆಲ್ತಿ ವುಮನ್ ಇನಿಶಿಯೇಟಿವ್: ಅನೇಮಿಯಾ ಜಾಗೃತಿ ಮತ್ತು ತಪಾಸಣೆ’

ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ಹೆಲ್ತಿ ವುಮನ್ ಇನಿಶಿಯೇಟಿವ್: ಅನೇಮಿಯಾ ಜಾಗೃತಿ ಮತ್ತು ತಪಾಸಣೆ’


ಪುತ್ತೂರು: ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಹಾಗೂ ಆರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ‘ಹೆಲ್ತಿ ವುಮನ್ ಇನಿಶಿಯೇಟಿವ್: ಅನೇಮಿಯಾ ಜಾಗೃತಿ ಮತ್ತು ತಪಾಸಣೆ’ ಕಾರ್ಯಕ್ರಮ ನಡೆಯಿತು.


ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಅನೇಮಿಯಾ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ವಂ. ಡಾ. ಆಂಟನಿ ಪ್ರಕಾಶ್ ಮೊಂತೆರೊ ಅವರು, ದೈಹಿಕ ಹಾಗೂ ಮಾನಸಿಕ ಆರೋಗ್ಯ ಎರಡೂ ಮುಖ್ಯವೆಂದು ತಿಳಿಸಿ ವಿದ್ಯಾರ್ಥಿಗಳು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಮತ್ತು ಅಗತ್ಯವಿದ್ದಾಗ ವೈದ್ಯಕೀಯ ಸಲಹೆ ಪಡೆಯಬೇಕು ಎಂದು ಹೇಳಿದರು.


ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಪುತ್ತೂರಿನ ಫಾ. ಪತ್ರಾವೊ ಹಾಸ್ಪಿಟಲ್‌ನ ಜನರಲ್ ಸರ್ಜನ್ ಜ್ವಾನ ತೇಜಸ್ವಿ ಸಿಕ್ವೇರಾ ಅವರು ಅನೇಮಿಯಾ ಕುರಿತು ಸಮಗ್ರ ಮಾಹಿತಿ ನೀಡಿ, ಅನೇಮಿಯಾದ ಕಾರಣಗಳು, ಲಕ್ಷಣಗಳು ಮತ್ತು ತಡೆಗಟ್ಟುವ ವಿಧಾನಗಳನ್ನು ವಿವರಿಸಿ ಐರನ್ ಮತ್ತು ಪೋಷಕಾಂಶಗಳಿಂದ ಸಮೃದ್ಧವಾದ ಸಮತೋಲನ ಆಹಾರದ ಅಗತ್ಯತೆ ಹಾಗೂ ನಿಯಮಿತ ಆರೋಗ್ಯ ತಪಾಸಣೆ ಬಗ್ಗೆ ತಿಳಿಸಿದರು.

ವೇದಿಕೆಯಲ್ಲಿ ಉಪ ಪ್ರಾಂಶುಪಾಲ ಡಾ. ವಿಜಯಕುಮಾರ್ ಮೊಳೆಯಾರ್, ಯುವ ರೆಡ್ ಕ್ರಾಸ್ ಸಂಯೋಜಕಿ ಡಾ. ಡಿಂಪಲ್ ಜೆನ್ನಿಫರ್ ಫರ್ನಾಂಡಿಸ್ ಹಾಗೂ ಆರೋಗ್ಯ ಕೇಂದ್ರ ಸಂಯೋಜಕಿ ಶಶಿಪ್ರಭಾ ಉಪಸ್ಥಿತರಿದ್ದರು. 

ಮನೀಶ್ ಮತ್ತು ತಂಡ ಪ್ರಾರ್ಥಿಸಿ, ವಿಶ್ವ್ಮಿತ್ ವಿದೀಪ್ ಸ್ವಾಗತಿಸಿದರು. ಕೃಷ್ಣ ವಂಶಿ ವಂದಿಸಿ, ಶೇಖ್ ಮೊಹಮ್ಮದ್ ಫಹೀಮ್ ಕಾರ್ಯಕ್ರಮ ನಿರೂಪಿಸಿದರು. ಸುಮಾರು 300 ವಿದ್ಯಾರ್ಥಿಗಳು ಕಾರ್ಯಕ್ರಮದಿಂದ ಪ್ರಯೋಜನ ಪಡೆದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article