ಉದ್ಯೋಗವಕಾಶ: ಎಪ್ರಿಲ್ 9 ರಂದು ನೇರ ಸಂದರ್ಶನ
ಮಂಗಳೂರು: ಎಕ್ಸ್‌ಫರ್ಟ್ ಕಾಲೇಜು, ಮಂಗಳೂರು, ಕಲ್ಚರಲ್ ಹೈವೇ, ಮಂಗಳೂರು ಹಾಗೂ ಕೆ.ಎನ್.ಎನ್.ಡಿ ಅಸೋಸಿಯೇಟ್ಸ್ ಪ್ರೈವೇಟ್ ಲಿಮಿಟೆಡ್, ಮಂಗಳೂರು ಖಾಸಗಿ ಕಂಪೆನಿಗಳ ವತಿಯಿಂದ ಮಂಗಳೂರಿನಲ್ಲಿ ಖಾಲಿಯಿರುವ ಸರ್ವಿಸ್ ಪ್ರೊಜೆಕ್ಟ್ ಇಂಜಿನಿಯರ್, ಪ್ರಾಜೆಕ್ಟ್ ಇಂಜಿನಿಯರ್, ಸರ್ವೀಸ್ ಇಂಜಿನಿಯರ್, ಸರ್ವೀಸ್ ಟೆಕ್ನಿಶಿಯನ್, ಸಿಸ್ಟಮ್ ಆಪರೇಟರ್, ಫುಡ್ ಕುಕ್, ಹೆವಿ ವೆಹಿಕಲ್ ಡ್ರೈವರ್, ಮೆಕ್ಯಾನಿಕಲ್ ಟೆಕ್ನಿಶಿಯನ್, ಸೇಲ್ಸ್ ಮಾರ್ಕೇಟಿಂಗ್, ವೇರ್ ಹೌಸ್ ಅಸೋಸಿಯೇಟ್ಸ್, ಬ್ಯುಸಿನೆಸ್ ಡೆವಲಪ್‌ಮೆಂಟ್ ಮ್ಯಾನೇಜರ್, ಸೀನಿಯರ್ ವೇರ್ ಹೌಸ್ ಅಸೋಸಿಯೇಟ್ಸ್, ಆಫೀಸ್ ಎಕ್ಸಿಕ್ಯೂಟಿವ್, ಹಾಸ್ಟೆಲ್ ವಾರ್ಡನ್ ಹಾಗೂ ಸ್ಟಡಿ ಇನ್ವಿಜಿಲೇಟರ್ ಹುದ್ದೆಗಳಿಗೆ ಉದ್ಯೋಗದ ಅವಕಾಶ ಲಭ್ಯವಿದೆ.
ಈ ಸಂಬಂಧ ನೇರ ಸಂದರ್ಶನವನ್ನು ಎಪ್ರಿಲ್ 9 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಪಡೀಲ್ ಪ್ರಜಾ ಸೌಧದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಲಾಗಿದೆ.
ನೇರ ಸಂದರ್ಶನದಲ್ಲಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿ, ಐ.ಟಿ.ಐ, ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರುವ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಸ್ವ-ವಿವರವುಳ್ಳ ಬಯೋಡೇಟಾದೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.