ಸುಳ್ಯ ಆಲೆಟ್ಟಿ-ಬಡ್ಡಡ್ಕ-ಕೂರ್ನಡ್ಕ ಸೇತುವೆ ದುರಸ್ತಿ: ಸಂಚಾರ ಮಾರ್ಗ ಬದಲಾವಣೆ
Sunday, April 19, 2026
ಮಂಗಳೂರು: ಸುಳ್ಯ ತಾಲೂಕು ಆಲೆಟ್ಟಿ-ಬಡ್ಡಡ್ಕ-ಕೂರ್ನಡ್ಕ ಜಿಲ್ಲಾ ಮುಖ್ಯ ರಸ್ತೆಯ ಕಿ.ಮೀ.0.80 ರಲ್ಲಿನ ಸೇತುವೆಯ ದುರಸ್ತಿ ಕೆಲಸದ ಪ್ರಯುಕ್ತ ಎಪ್ರಿಲ್ 15 ರಿಂದ ಮೇ 31 ರವರೆಗೆ ಸುಳ್ಯದಿಂದ ಆಲೆಟ್ಟಿ-ಬಡ್ಡಕ್ಕ-ಕೂರ್ನಡ್ಕ ಮತ್ತು ಸುಳ್ಯದಿಂದ ನಾರ್ಕೋಡು-ಕೋಲ್ಚಾರು-ಕಣಕ್ಕೂರು-ಬಂದ್ಯಡ್ಕ ಹಾಗೂ ಕೇರಳ ಭಾಗಕ್ಕೆ ಸಂಚರಿಸುವ ವಾಹನಗಳು ಜಿಲ್ಲಾ ಮುಖ್ಯ ರಸ್ತೆಯಾದ ಸುಳ್ಯ-ಕಾಂತಮಂಗಲ-ಅಜ್ಜಾವರ(ಶಾಂತಿಮಜಲು)-ಮೇದಿನಡ್ಕ-ನಾರ್ಕೋಡು ಮತ್ತು ಸುಳ್ಯ-ಕಾಂತಮಂಗಲ-ಅಜ್ಜಾವರ-ಮಂಡೆಕೋಲು-ಕನ್ಯಾನ ಮಾರ್ಗವಾಗಿ ಕೇರಳ ಗ್ರಾಮೀಣ ರಸ್ತೆ ಮೂಲಕ ಸಂಚರಿಸುವಂತೆ ಸಂಚಾರ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಆದೇಶಿಸಿದ್ದಾರೆ.