ಬಜಪೆ ಪಟ್ಟಣ ಪಂಚಾಯತ್: ಅನುಮತಿ ರಹಿತ ಬ್ಯಾನರ್ ನಿರ್ಬಂಧ

ಬಜಪೆ ಪಟ್ಟಣ ಪಂಚಾಯತ್: ಅನುಮತಿ ರಹಿತ ಬ್ಯಾನರ್ ನಿರ್ಬಂಧ

ಮಂಗಳೂರು: ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಅನುಮತಿ ಪಡೆಯದೇ ಬ್ಯಾನರ್ ಪ್ರದರ್ಶಿಸುತ್ತಿರುವುದು ಕಂಡು ಬಂದಿದ್ದು ಅನುಮತಿ ಮುಕ್ತಾಯಗೊಂಡ ನಂತರವೂ ತೆರವುಗೊಳಿಸದೇ ಇರುವುದರಿಂದ ಪಟ್ಟಣ ಪಂಚಾಯತ್ ವತಿಯಿಂದ ತೆರವುಗೊಳಿಸಿ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

ಆದುದರಿಂದ ಈಗಾಗಲೇ ಅಳವಡಿಸಿರುವ ಬ್ಯಾನರ‍್ಗಳಿಗೆ ಸಂಬಂಧಿಸಿ ಮುಂದಿನ 10 ದಿನಗಳ ಒಳಗೆ ಅನುಮತಿ ರಹಿತ ಬ್ಯಾನರ‍್ಗಳನ್ನು ತೆರವುಗೊಳಿಸಬೇಕು. ಮುಂದಿನ ದಿನಗಳಲ್ಲಿ ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬ್ಯಾನರ್ ಅಳವಡಿಸುವವರು ಕಡ್ಡಾಯವಾಗಿ ಅನುಮತಿ ಪಡೆದು ಅನುಮತಿ ನೀಡಲಾದ ಸ್ಥಳದಲ್ಲಿಯೇ ಅಳವಡಿಸಬೇಕು. ತಪ್ಪಿದ್ದಲ್ಲಿ ಅನುಮತಿ ರಹಿತ ಬ್ಯಾನರ‍್ಗಳನ್ನು ಪಟ್ಟಣ ಪಂಚಾಯತ್ ವತಿಯಿಂದ ತೆರವುಗೊಳಿಸಿ ಅಳವಡಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಜಪೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article