ಉಳ್ಳಾಲ ತಾಲೂಕಿನಲ್ಲಿ ಸುಸ್ಥಿರ ಸ್ವಚ್ಚತೆ ಸುಸ್ಥಿರ ಅಭಿವೃದ್ಧಿ ಅಭಿಯಾನ

ಉಳ್ಳಾಲ ತಾಲೂಕಿನಲ್ಲಿ ಸುಸ್ಥಿರ ಸ್ವಚ್ಚತೆ ಸುಸ್ಥಿರ ಅಭಿವೃದ್ಧಿ ಅಭಿಯಾನ


ಮುಡಿಪು: ಉಳ್ಳಾಲ ತಾಲೂಕಿನಾದ್ಯಂತ ಸೃಷ್ಟಿ ಮಾಡಿರುವ ಬಯಲು ಕಸಾಲಯಗಳನ್ನು ಅಳಿಸಿ ಸುಸ್ಥಿರ ಅಭಿವೃದ್ಧಿ ಕಾರ್ಯವನ್ನು ಅಭಿಯಾನ ರೀತಿಯಲ್ಲಿ ಶೀಘ್ರ ವಾಗಿ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ಕರ್ನಾಟಕ ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್ ತಿಳಿಸಿದ್ದಾರೆ.

ಮುಡಿಪು ಜೀವನ್ ಮೂರ್ತಿ ಸರ್ವೋದಯ ಮಂಟಪದಲ್ಲಿ ನಡೆದ ಶೂನ್ಯ ಕಸ ನಿರ್ವಹಣೆ ಸ್ವಚ್ಚ ಮನೆ ಸ್ವಯಂ ಘೋಷಣೆ ಸುಸ್ಥಿರ ಸ್ವಚ್ಛತೆ ಸುಸ್ಥಿರ ಅಭಿವೃದ್ಧಿ ಸಂವಾದಕ್ಕೆ ಚಾಲನೆ ನೀಡಿ ಏ.19.20 ಯುನೈಟೆಡ್ ಆಫ್ ರೋಡ್ಸ್ ಮಂಗಳೂರು ವತಿಯಿಂದ ಅಸಾಹಾಯಕ ಕುಟುಂಬಗಳ ಸಮಗ್ರ ಅಭಿವೃದ್ಧಿಗೆ ನೀಡಲಾದ ಒಂದು ಲಕ್ಷ ಇಪ್ಪತ್ತೈದು ಸಾವಿರ ಮೊತ್ತದ ಶೈಕ್ಷಣಿಕ, ಆರೋಗ್ಯ,ಸ್ವದ್ಯೋಗ,ಸೋಲಾರ್ ಸೌಲಭ್ಯಗಳನ್ನು ವಿತರಿಸಿ ಮಾತನಾಡಿದರು.ರೋಗ ಮುಕ್ತ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪ್ಲಾಸ್ಟಿಕ್ ಮಾಲಿನ್ಯ ಮುಕ್ತ ಸ್ವಚ್ಚ ಪರಿಸರ  ಅಗತ್ಯವಾಗಿದ್ದು ಈ ದಿಸೆಯಲ್ಲಿ ಸರಕಾರ ಸಮಾಜ ಹಾಗೂ ಸಂಘ ಸಂಸ್ಥೆಗಳು ಒಂದಾಗಿ ಶ್ರಮಿಸುವುದು ಅಗತ್ಯ ವೆಂದರು. ಸ್ವಚ್ಚತೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಜನ ಶಿಕ್ಷಣ ಟ್ರಸ್ಟ್ ಹಾಗೂ ಉಳ್ಳಾಲ, ಪುತ್ತೂರು, ಮಂಗಳೂರು ತಾಲೂಕಿನ 11 ಕುಟಂಬಗಳಿಗೆ ನೆರವಾದ ಏ.19.20 ಯುನೈಟೆಡ್ ಆಫ್ ರೋಡ್ಸ್ ಮಂಗಳೂರು ತಂಡದ ಸದಸ್ಯರ ಸೇವಾ ಕಾರ್ಯ ನನ್ನು ಶ್ಲಾಘಿಸಿದರು.

ಮಂಗಳೂರು ವಿ ವಿ ಕುಲಪತಿಗಳಾದ ಪ್ರೊಫೆಸರ್ ಪಿ. ಎಲ್. ಧರ್ಮ ಮಾತನಾಡುತ್ತಾ ಗ್ರಾಮ ಅಧ್ಯಯನದೊಂದಿಗೆ ಕಸ ಮುಕ್ತ ಗ್ರಾಮ ನಿರ್ಮಾಣಕ್ಕೆ ಮಂಗಳೂರು ವಿ ವಿ  ವಿದ್ಯಾರ್ಥಿಗಳಿಗೆ ಸ್ವಚ್ಛತಾ ಪಾಠ ದೊಂದಿಗೆ ಸ್ವಚ್ಛ ಗ್ರಾಮ ಅಭಿಯಾನ ಆರಂಭಿಸಲಾಗಿದೆ ಎಂದು ತಿಳಿಸಿದರು. 

ವಿಶ್ವ ಸಂಸ್ಥೆಯ 17 ಸಾಮಾಜಿಕ ಅಭಿವೃದ್ಧಿ ಗುರಿಗಳ ಬಗ್ಗೆ ಪಿ ಎ ಕಾಲೇಜು ಪ್ರಾಧ್ಯಾಪಕ ಡಾ ಸಿ ವಿ ಪೂಜಾರ್ ಅರಿವು ಮೂಡಿಸಿದರು. ಯುನೈಟೆಡ್ ಆಫ್ ರೋಡ್ಸ್ ಅಧ್ಯಕ್ಷ ಅವಿನಾಶ್ ಅಡಪ ನಡಿಗುತ್ತು ,ನಾಸೀರ್ ನಡುಪದವು, ವಿಜೇಶ್ ನಾಯ್ಕ್ ನಡಿಗುತ್ತು ಜನ ಜೀವನದ ಗೌರವ ಅಧ್ಯಕ್ಷ ರಮೇಶ ಶೇಣವ, ಅಧ್ಯಕ್ಷ ರಾಧಾಕೃಷ್ಣ ರೈ ಉಮಿಯ ಮುಡಿಪು ಉತ್ಸವ ಸಮಿತಿಯ ಹೈದರ್ ಕೈರಂಗಳ, ಪ್ರೌಢ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಇಬ್ರಾಹಿಂ ನಡುಪದವು, ಉಮಾನಾಥ ಕೋಟ್ಯಾನ್, ಜಮಿಯ್ಯತುಲ್ ಫಲಾಹ್ ನ ಅಬ್ದುನ್ ನಾಸೀರ್,  ಅಬ್ದುಲ್ ರಹಿಮಾನ್ ಕೋಡಿಜಾಲ್ ಸೀತಾರಾಮ್ , ಪಿ.ಎ ಕಾಲೇಜಿನ ಪ್ರೊ ಪ್ರಶಾಂತ್ ಉಪಸ್ಥಿತರಿದ್ದರು. ಜಿಲ್ಲಾ ಸ್ವಚ್ಚತಾ ರಾಯಭಾರಿ ಪ್ರಸ್ತಾವಿಸಿ ಕಸ ಮುಕ್ತ ಉಳ್ಳಾಲ ಕಾರ್ಯಾಚರಣೆಗೆ ಸರ್ವರೂ ಕೈ ಜೋಡಿಸ ಬೇಕೆಂದರು. ಸ್ಮೈಲ್ ಸ್ಕಿಲ್ ಸ್ಕೂಲ್ ವಿದ್ಯಾರ್ಥಿನಿಯರು, ಶಿಕ್ಷಕಿಯರು ಗ್ರಾಮ ಸ್ವರಾಜ್ ಅಭಿಯಾನ ಹಾಗೂ ಸ್ಕಿಲ್  ಇನ್ ವಿಲೇಜ್ ಯೋಜನೆಯ ಸಂಯೋಜಕ ಸಂಯೋಜಕಿಯರು ಸುಸ್ಥಿರ ಸ್ವಚ್ಚತೆ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುವ ಸಂಕಲ್ಪ ಮಾಡಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article