ವಿವಿ ಮಟ್ಟದ ಹಗ್ಗ ಜಗ್ಗಾಟ-ಪುರುಷರ ವಿಭಾಗ: ತೆಂಕನಡಿಯೂರು ಪ್ರಥಮ, ಮಹಿಳಾ ವಿಭಾಗ: ಅಜ್ಜರಕಾಡು ಪ್ರಥಮ

ವಿವಿ ಮಟ್ಟದ ಹಗ್ಗ ಜಗ್ಗಾಟ-ಪುರುಷರ ವಿಭಾಗ: ತೆಂಕನಡಿಯೂರು ಪ್ರಥಮ, ಮಹಿಳಾ ವಿಭಾಗ: ಅಜ್ಜರಕಾಡು ಪ್ರಥಮ


ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜು ಮತ್ತು ಮಂಗಳೂರು ವಿ.ವಿ. ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕಾಲೇಜಿನಲ್ಲಿ ಎ.18 ರಂದು ಆಯೋಜಿಸಲಾದ ಅಂತರ್ ಕಾಲೇಜು ಪುರುಷರು ಮತ್ತು ಮಹಿಳಾ ವಿಭಾಗದ ಹಗ್ಗಜಗ್ಗಾಟ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣ ಕಾರ್ಯಕ್ರಮ ನಡೆಯಿತು.

ಪುರುಷರ ವಿಭಾಗದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ಪ್ರಥಮ, ಆಳ್ವಾಸ್ ಕಾಲೇಜು ಮೂಡಬಿದಿರೆ ದ್ವಿತೀಯ, ಕೆಎಸ್‌ಎಸ್ ಸುಬ್ರಹ್ಮಣ್ಯ ತೃತೀಯ, ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ ಚತುರ್ಥ ಸ್ಥಾನ ಪಡೆಯಿತು.


ಮಹಿಳಾ ವಿಭಾಗದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡು ಪ್ರಥಮ, ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ದ್ವಿತೀಯ, ಆಳ್ವಾಸ್ ಕಾಲೇಜು ಮೂಡಬಿದಿರೆ ತೃತೀಯ, ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ ಚತುರ್ಥ ಸ್ಥಾನ ಪಡೆಯಿತು.  

ಕೆಎಸ್‌ಎಸ್ ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿ.ವಿ. ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಡಾ. ಹರಿದಾಸ್ ಕೂಳೂರು, ಸುಬ್ರಹ್ಮಣ್ಯ ಕೆಎಸ್‌ಎಸ್ ಕಾಲೇಜಿನ ಪಿಟಿಎ ಅಧ್ಯಕ್ಷ ರವಿ ಕಕ್ಕೆಪದವು, ದೈಹಿಕ ಶಿಕ್ಷಣ ನಿರ್ದೇಶಕ ಡಾ. ದಿನೇಶ್ ಉಪಸ್ಥಿತರಿದ್ದರು. 

ಬೆಳ್ಳಾರೆ ಸರಕಾರಿ ಪ್ರಥಮ ದರ್ಜೆ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ರಾಮಚಂದ್ರ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು. ಡಾ. ವಿನ್ಯಾಸ್ ಹೊಸಳ್ಳಿಕೆ ಸ್ವಾಗತಿಸಿ, ಉಪನ್ಯಾಸಕಿ ಆರತಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article