ಅಪಘಾತದಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಕಲಾವಿದೆ ಶ್ರೀಲತಾ ತಂತ್ರಿ ನಿಧನ
Tuesday, May 26, 2026
ಕಿನ್ನಿಗೋಳಿ: ಪ್ರತಿಭಾನ್ವಿತ ಕಲಾವಿದೆ, ಪುನರೂರು ನಿವಾಸಿ, ಶ್ರೀಲತಾ ತಂತ್ರಿ (22) ಭಾನುವಾರ ನಿಧನರಾದರು.
ಕಟೀಲು, ಮೂಡುಬಿದ್ರೆ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮುಗಿಸಿ, ಉದ್ಯೋಗಕ್ಕಾಗಿ 2025ರ ಜುಲೈನಲ್ಲಿ ದುಬೈಗೆ ಹೋಗಿದ್ದ ಶ್ರೀಲತಾ ತಂತ್ರಿ ಅಲ್ಲಿ ನವೆಂಬರ್‌ನಲ್ಲಿ ನಡೆದ ವಾಹನ ಅಪಘಾತದಲ್ಲಿ ತಲೆಗೆ ಗಾಯವಾಗಿ ಕೋಮಾ ಸ್ಥಿತಿಯಲ್ಲಿದ್ದರು. ಕಂಪನಿಯವರೇ ಚಿಕಿತ್ಸಾ ವೆಚ್ಚವನ್ನು ನೋಡಿಕೊಂಡಿದ್ದು, ಪರಿಸ್ಥಿತಿ ಸುಧಾರಣೆ ಕಾಣದೆ, ಮೂರು ದಿನಗಳ ಹಿಂದೆ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಕರೆತರಲಾಗಿತ್ತು.
ಮೃತರು ತಾಯಿ ಮತ್ತು ಅಕ್ಕನನ್ನು ಅಗಲಿದ್ದಾರೆ. ಶಾಲಾ ಕಾಲೇಜು ದಿನಗಳಲ್ಲಿ ನೃತ್ಯಗಾರ್ತಿಯಾಗಿ, ರಾಜ್ಯಮಟ್ಟದ ಕ್ರೀಡಾಪಟುವಾಗಿ, ಕಲಿತ ಶಿಕ್ಷಣ ಸಂಸ್ಥೆಗಳಲ್ಲಿ ಅತ್ಯುತ್ತಮ ವಿದ್ಯಾರ್ಥಿನಿ ಎಂದು ಬಹುಮಾನಿತೆಯಾಗಿದ್ದರು.