ಅಂಗನವಾಡಿ ನಿರ್ಮಾಣಕ್ಕೆ ಶಾಸಕ ಡಾ. ಭರತ್ ಶೆಟ್ಟಿ ಅವರಿಂದ ಶಿಲಾನ್ಯಾಸ
Thursday, May 28, 2026
ಮಂಗಳೂರು: ಮಂಗಳೂರು ನಗರ ಶಿಶು ಅಭಿವೃದ್ಧಿ ಯೋಜನೆಯಡಿ, ಮಹಾತ್ಮ ಗಾಂಧಿ ಬೊಂದೇಲ್ ಅಂಗನವಾಡಿ ಕಟ್ಟಡ ನಿರ್ಮಾಣಕ್ಕಾಗಿ 2024-25ನೇ ಸಾಲಿನ ನಗರ ಯೋಜನೆಯ ಅಡಿಯಲ್ಲಿ 20 ಲಕ್ಷ ರೂ. ಅನುದಾನದ ಶಿಲಾನ್ಯಾಸ ಕಾರ್ಯಕ್ರಮವನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿಯವರು ಬೊಂದೇಲ್ ಕಂಬ್ಳ ಅಶ್ವತ್ಥ ಕಟ್ಟೆ ಸಮೀಪದ PWD ಕಚೇರಿ ಮುಂಭಾಗದಲ್ಲಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಯೋಜನಾಧಿಕಾರಿ ಶ್ವೇತಾ ಎನ್., ಸಂದೀಪ್, ಭೂ ನ್ಯಾಯ ಮಂಡಳಿಯ ಮಾಜಿ ಸದಸ್ಯ ಹಾಗೂ ಪ್ರಮುಖರಾದ ಶಿವಾಜಿ ಕುಲಾಲ್, ರವೀಂದ್ರ ನಾಯ್ಕ್, ಅಂಗನವಾಡಿ ಪ್ರಮುಖರು ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.
