ಕರಾವಳಿಯಲ್ಲಿ ಪ್ರಖರ ಬಿಸಿಲು, ಸಂಜೆ ಮಳೆ ಮುನ್ಸೂಚನೆ

ಕರಾವಳಿಯಲ್ಲಿ ಪ್ರಖರ ಬಿಸಿಲು, ಸಂಜೆ ಮಳೆ ಮುನ್ಸೂಚನೆ

ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ವಿಚಿತ್ರ ಹವಾಮಾನ ಕಂಡುಬರುತ್ತಿದೆ. ದಿನಪೂರ್ತಿ ಪ್ರಖರ ಬಿಸಿಲು ಮತ್ತು ಸೆಕೆಯಿಂದ ಕಾರವಳಿ ಸಂಜೆಯಾಗುತ್ತಿದ್ದಂತೆ ಮೋಡಕವಿದ ವಾತಾವರಣ ಸೃಷ್ಟಿಯಾಗುತ್ತಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯದ ಪರಿಣಾಮವಾಗಿ ಮಂಗಳವಾರ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹವಾಮಾನ ತಜ್ಞರ ಪ್ರಕಾರ, ಬಂಗಾಳಕೊಲ್ಲಿಯ ಮಧ್ಯಮ ಸ್ತರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯ ಪರಿಣಾಮದಿಂದಾಗಿ ವಾತಾವರಣದಲ್ಲಿ ಭಾರಿ ಬದಲಾವಣೆಯಾಗಿದೆ. ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯಿಂದ ಬೀಸುತ್ತಿರುವ ಗಾಳಿಯ ಪರಿಚಲನೆಯಲ್ಲಿ ಏರುಪೇರಾಗಿದ್ದು, ಇದು ತೇವಾಂಶಭರಿತ ಗಾಳಿಯನ್ನು ಭೂಭಾಗದ ಕಡೆಗೆ ತಳ್ಳುತ್ತಿದೆ. ಹಗಲಿನ ತೀವ್ರ ತಾಪಮಾನಕ್ಕೆ ಈ ತೇವಾಂಶ ಸೇರಿಕೊಂಡಾಗ ಸಂಜೆಯ ವೇಳೆಗೆ ಸ್ಥಳೀಯವಾಗಿ ದಟ್ಟವಾದ ಕರಗುವ ಮೋಡಗಳು ಸೃಷ್ಟಿಯಾಗುತ್ತಿವೆ. ಈ ಕಾರಣದಿಂದಾಗಿ ಕರಾವಳಿ ಮತ್ತು ಒಳನಾಡಿನ ಹಲವು ಪ್ರದೇಶಗಳಲ್ಲಿ ಸಂಜೆ ಅಥವಾ ರಾತ್ರಿಯ ಅವಧಿಯಲ್ಲಿ ಹಠಾತ್ ಗುಡುಗು, ಮಿಂಚು ಸಹಿತ ಮಳೆಯಾಗುವ ವಾತಾವರಣ ನಿರ್ಮಾಣವಾಗುತ್ತಿದೆ. ಮಂಗಳವಾರ ಹಗಲಿನ ವೇಳೆಯಲ್ಲಿ ಭಾಗಶಃ ಮೋಡಕವಿದ ವಾತಾವರಣ ಇರಲಿದ್ದು, ಸಂಜೆ ಹಾಗೂ ರಾತ್ರಿಯ ಅವಧಿಯಲ್ಲಿ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಅಲ್ಲಲ್ಲಿ ಗುಡುಗು ಮುನ್ಸೂಚನೆ ನೀಡಲಾಗಿದೆ.

 ಗುಡುಗು-ಮಿಂಚಿನ ಮುನ್ನೆಚ್ಚರಿಕೆ:

ಮಳೆಯಾಗುವ ಸಂದರ್ಭದಲ್ಲಿ ತಾಸಿಗೆ 30 ರಿಂದ 40 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯೂ ಇರುವುದರಿಂದ ಸಾರ್ವಜನಿಕರು ಮತ್ತು ಮೀನುಗಾರರು ಜಾಗರೂಕರಾಗಿರಲು ಸೂಚಿಸಲಾಗಿದೆ.

 ತಡವಾಗಲಿದೆಯೇ ಮುಂಗಾರು ಪ್ರವೇಶ?

ಇದೇ ರೀತಿಯ ವಾತಾವರಣ ಮುಂದಿನ ಕೆಲವು ದಿನಗಳ ಕಾಲ ಮುಂದುವರಿಯುವ ಲಕ್ಷಣಗಳಿವೆ. ಆದರೆ, ಪ್ರಸ್ತುತ ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ಕಂಡುಬರುತ್ತಿರುವ ಮಾರುತಗಳ ಚಲನವಲನಗಳನ್ನು ಗಮನಿಸಿದರೆ, ಈ ಬಾರಿ ರಾಜ್ಯಕ್ಕೆ ಮುಂಗಾರು ಪ್ರವೇಶವು ನಿಗದಿತ ಸಮಯಕ್ಕಿಂತ ತುಸು ತಡವಾಗುವ ಸಾಧ್ಯತೆಗಳು ದಟ್ಟವಾಗಿ ಗೋಚರಿಸುತ್ತಿವೆ. ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಕೇರಳ ಪ್ರವೇಶಿಸುವ ಮುಂಗಾರು ಮಾರುತಗಳ ವೇಗ ಸದ್ಯಕ್ಕೆ ಮಂದಗತಿಯಲ್ಲಿದ್ದು, ಕೃಷಿಕರಲ್ಲಿ ಆತಂಕ ಮೂಡಿಸಿದೆ. ಹವಾಮಾನ ಇಲಾಖೆಯು ಮುಂಗಾರಿನ ಚಲನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article