ಬಿಸಿಲಿನ ಆಘಾತ: ವೆನ್‌ಲಾಕ್‌ನಲ್ಲಿ ವಿಶೇಷ ಘಟಕ ಸ್ಥಾಪನೆ
Wednesday, May 6, 2026
ಮಂಗಳೂರು: ಮಂಗಳೂರಿನಲ್ಲಿ ಹೆಚ್ಚುತ್ತಿರುವ ಬಿಸಿಲಿನ ಹಿನ್ನೆಲೆಯಲ್ಲಿ, ವೆನ್ಲಾಕ್ ಆಸ್ಪತ್ರೆಯ ಹೊಸ ಶಸ್ತ್ರಚಿಕಿತ್ಸಾ ಬ್ಲಾಕ್ನ 5ನೇ ಮಹಡಿಯಲ್ಲಿ ಶಾಖಾಘಾತಕ್ಕಾಗಿ 10 ಹಾಸಿಗೆಗಳ ವಿಶೇಷ ಘಟಕವನ್ನು ವ್ಯವಸ್ಥೆ ಮಾಡಲಾಗಿದೆ.
ಶಾಖಾಘಾತ..
ಇದು ವೈದ್ಯಕೀಯ ತುರ್ತುಸ್ಥಿತಿ. ದೇಹದ ಉಷ್ಣತೆ 104°F (40°C) ಅಥವಾ ಅದಕ್ಕಿಂತ ಹೆಚ್ಚು, ಗೊಂದಲ, ಪ್ರಜ್ಞೆ ತಪ್ಪುವುದು ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ತುರ್ತು ಸೇವೆಗೆ 108 ಕ್ಕೆ ಕರೆ ಮಾಡಬಹುದು.