ಮುಂದಿನ ವಾರದಿಂದ ನರೇಗಾ ಫಲಾನುಭವಿಗಳಿಗೆ ಕಡ್ಡಾಯ E-KYC: ವಿಶೇಷ ಗ್ರಾಮಸಭೆ ಆಯೋಜನೆ

ಮುಂದಿನ ವಾರದಿಂದ ನರೇಗಾ ಫಲಾನುಭವಿಗಳಿಗೆ ಕಡ್ಡಾಯ E-KYC: ವಿಶೇಷ ಗ್ರಾಮಸಭೆ ಆಯೋಜನೆ

ಮೂಡುಬಿದಿರೆ: ತಾಲೂಕಿನ 12 ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಕುಟುಂಬದ ಉದ್ಯೋಗ ಚೀಟಿ ಹೊಂದಿರುವ ಫಲಾನುಭವಿಗಳಿಗಾಗಿ ಮುಂದಿನ ವಾರದಿಂದ ವಿಶೇಷ ಗ್ರಾಮಸಭೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಸಭೆಗಳಲ್ಲಿ ಉದ್ಯೋಗ ಚೀಟಿ ಹೊಂದಿರುವ ಕುಟುಂಬಸ್ಥರು ಕಡ್ಡಾಯವಾಗಿ ಭಾಗವಹಿಸಿ E-KYC ದೃಢೀಕರಣವನ್ನು ಮಾಡಿಸಿಕೊಳ್ಳಬೇಕೆಂದು ಮೂಡುಬಿದಿರೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಸರ್ಕಾರದ ಇತ್ತೀಚಿನ ಆದೇಶದಂತೆ, E-KYC ದೃಢೀಕರಣ ಮಾಡಿಕೊಳ್ಳದ ಫಲಾನುಭವಿಗಳಿಗೆ ನರೇಗಾ ಯೋಜನೆಯಡಿ ಲಭ್ಯವಿರುವ ಯಾವುದೇ ಸೌಲಭ್ಯಗಳು ದೊರೆಯುವುದಿಲ್ಲ. ಒಂದು ವೇಳೆ E-KYC ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೆ ಅಂತಹ ಉದ್ಯೋಗ ಚೀಟಿಗಳು ರದ್ದಾಗಲಿದ್ದು, ಒಮ್ಮೆ ರದ್ದಾದ ಚೀಟಿಯನ್ನು ಭವಿಷ್ಯದಲ್ಲಿ ಪುನರ್ ಸ್ಥಾಪಿಸಲು ಅವಕಾಶವಿರುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಆದ್ದರಿಂದ, ಯೋಜನೆಯಡಿ ಉದ್ಯೋಗ ಚೀಟಿ ಹೊಂದಿರುವ ಎಲ್ಲಾ ಸಾರ್ವಜನಿಕರು ಆಯಾ ಗ್ರಾಮ ಪಂಚಾಯತ್‌ಗಳಲ್ಲಿ ನಿಗದಿಪಡಿಸಿದ ದಿನಾಂಕದಂದು ತಪ್ಪದೆ ಹಾಜರಾಗಿ E-KYC ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಕೋರಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article