ಮೂಡುಬಿದಿರೆಯಲ್ಲಿ ಗಾಳಿ ಮಳೆಯ ಅವಾಂತರ: ರಾಷ್ಟ್ರೀಯ ಹೆದ್ದಾರಿಗೆ ಉರುಳಿದ ಮರಗಳು
Saturday, May 16, 2026
ಮೂಡುಬಿದಿರೆ: ತಾಲೂಕಿನಲ್ಲಿ ಶನಿವಾರ ಸಂಜೆ ಬೀಸಿದ ಗಾಳಿ ಮಳೆಗೆ ಅಲಂಗಾರು ರಿಂಗ್ ರೋಡ್ ನಡುವೆ ಸಂಪಕಿ೯ಸಿರುವ ರಾಷ್ಟೀಯ ಹೆದ್ದಾರಿಗೆ ಮರಗಳು ಉರುಳಿ ಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಮೂಡುಬಿದಿರೆ ಪೇಟೆಯ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ "ಕಡಲ್" ಹೊಟೇಲ್ ಮುಂಭಾಗ ಮರದ ಕೊಂಬೆ ತುಂಡಾಗಿ ಅಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೆ ಬಿದ್ದ ಪರಿಣಾಮ ಮೂರು ದ್ವಿಚಕ್ರ ವಾಹನಗಳು ಜಖಂಗೊಂಡಿವೆ.




