ಚಿಕಿತ್ಸೆಯ ವೆಚ್ಚಕ್ಕಾಗಿ ಸಾಯಿ ಮಾನಾ೯ಡ್ ಸೇವಾ ಸಂಘದಿಂದ ನೆರವು
Saturday, May 2, 2026
ಮೂಡುಬಿದಿರೆ: ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ (ರಿ.)ಅಮನಬೆಟ್ಟು, ಪಡುಮಾರ್ನಾಡ್ ಇದರ 93ನೇ ಸೇವಾ ಯೋಜನೆ ಏಪ್ರಿಲ್ ತಿಂಗಳ ಮೊದಲ ಯೋಜನೆಯ ರೂ. 10,000ವನ್ನು ಅನಾರೋಗ್ಯ ಹೊಂದಿರುವ ಕಾರ್ಕಳ ತಾಲೂಕಿನ ಸಚ್ಚರಿ ಪೇಟೆ ಪರಿಸರದ ಕುದ್ರುಬೆಟ್ಟು ಮನೆಯ ಉದಯ್ ಸುವರ್ಣ ಎಂಬವರ ಚಿಕಿತ್ಸೆಗೆ ನೀಡಲಾಯಿತು.
ವೃತ್ತಿಯಲ್ಲಿ ಮೊದಲು ಲೈನ್ ಸೇಲ್ ಮಾಡುತ್ತಿದ್ದ ಉದಯ್ ಸುವರ್ಣ ಅವರು ಕ್ಯಾನ್ಸರ್ ಎಂಬ ಮಾರಕ ಕಾಯಿಲೆಗೆ ಒಳಗಾಗಿ ಹಾಸಿಗೆಯಲ್ಲೇ ಮಲಗಿಕೊಂಡಿದ್ದಾರೆ. ಇವರಿಗೆ 3ಜನ ಮಕ್ಕಳಿದ್ದು, ದೊಡ್ಡ ಪುತ್ರಿ ಡಿಗ್ರಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಒಬ್ಬ ಮಗ ಪಿ. ಯು.ಸಿ. ಮುಗಿಸಿದ್ದು ಇನ್ನೊಬ್ಬ ಪುತ್ರ ಪ್ರಥಮ ಪಿ.ಯು.ಸಿ. ಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಉದಯ್ ಸುವರ್ಣ ಅವರ ತಾಯಿ ಕೂಡ ಅನಾರೋಗ್ಯ ದಲ್ಲಿದ್ದಾರೆ. ಪತ್ನಿ ಮನೆಯ ಜವಾಬ್ದಾರಿ ನೋಡಿಕೊಳ್ಳುತ್ತಿದ್ದಾರೆ. ಈಗ ಮನೆ ಖಚು೯ ಹಾಗೂ ಅವರ ಔಷಧಿ ವೆಚ್ಚ ಭರಿಸಲು ಹಣದ ಅವಶ್ಯಕತೆ ಇರುವುದರಿಂದ ಸೇವಾ ಸಂಘ ದಿಂದ 93ನೇ ಸೇವಾ ಯೋಜನೆಯ 10000 ರೂ.ನ ಚೆಕ್ಕನ್ನು ಮೂಡುಬಿದಿರೆ ಮಾರಿಗುಡಿ ದೇವಸ್ಥಾನ ಬಳಿ ಹಸ್ತಾಂತರಿಸಲಾಯಿತು.