ಹರಿಹರ ಪಲ್ಲತ್ತಡ್ಕ: ರಂಬೂಟಾನ್ ಕೊಯ್ಯವಾಗ ಬಿದ್ದು ಗಾಯ
Tuesday, May 26, 2026
ಸುಬ್ರಹ್ಮಣ್ಯ: ಹರಿಹರ ಪಲ್ಲತ್ತಡ್ಕದ ಯುವಕನೋರ್ವ ರಂಬೂಟಾನ್ ಕೊಯ್ಯವಾಗ ಬಿದ್ದು ಗಾಯವಾದ ಘಟನೆ ಮೇ.24 ರಂದು ನಡೆದಿದೆ.
ಹರಿಹರ ಪಲ್ಲತ್ತಡ್ಕ ದ ಕಲ್ಲೇಮಠ ಬಳಿ ರಘುರಾಮ ಎಂಬವರ ಮನೆಯಲ್ಲಿ ವಿನಯ್ ಎಂಬುವರು ರಂಬೂಟಾನ್ ಕೊಯ್ಯುತಿದ್ದಾಗ ಅಯ ತಪ್ಪಿ ಬಿದ್ದು ಸೊಂಟಕ್ಕೆ ಬಲವಾದ ಪೆಟ್ಟು ಬಿದ್ದು ಗಾಯವಾದ ಘಟನೆ ನಡೆದಿದೆ. ಬಳಿಕ ಸುಳ್ಯದಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ ಆಸ್ಪತ್ರೆಗೆ ಸೇರಿಸಲಾಗಿರುವುದಾಗಿ ತಿಳಿದು ಬಂದಿದೆ.