ನೀರಿನ ಸಮಸ್ಯೆ: ಗ್ರಾ.ಪಂ. ಮುತ್ತಿಗೆ
ತಿಲಕ್ ನಗರ ಪ್ರದೇಶದ ಜನರು ಕಳೆದ ಮೂರು ತಿಂಗಳಿನಿಂದ ನೀರಿಲ್ಲದೆ ಪರದಾಡುತ್ತಿದ್ದಾರೆ. ಈ ಬಗ್ಗೆ ನಿವಾಸಿಗಳು ಹಲವಾರು ಬಾರಿ ಗ್ರಾಮ ಪಂಚಾಯತ್ ಗೆ ಮನವಿ ಮಾಡಿದರೂ ಅಧಿಕಾರಿಗಳು ಈವರೆಗೂ ಸಮಸ್ಯೆಯನ್ನು ಬಗೆಹರಿಸಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇದರಿಂದ ಆಕ್ರೋಶ ಗೊಂಡ ಗ್ರಾಮಸ್ಥರು ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪಂಚಾಯತ್ 100 ರೂ ಇದ್ದ ಕುಡಿಯುವ ನೀರಿನ ದರವನ್ನು 150 ಕ್ಕೆ ಏರಿಕೆ ಮಾಡಿದೆ. ಆದರೂ ಸಮರ್ಪಕವಾಗಿ ನೀರು ಪೂರೈಕೆ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹೊಸ ಕೊಳವೆ ಬಾವಿ ಆಗುವವರೆಗೆ ಟ್ಯಾಂಕರ್ ನಲ್ಲಿ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು.
ಗ್ರಾಮಸ್ಥರಾದ ಅನಿಲ್ ತಿಲಕ್ ನಗರ, ಅಝರ್, ಖಲೀಲ್, ಅಶ್ಫಾಕ್, ಸತೀಶ್, ಬಾಬಣ್ಣ, ಧನಲಕ್ಷಿ, ಐಸಮ್ಮ ರುಕಿಯ, ಗೀತಾ, ಸುರೇಖಾ, ಕಾರ್ಮಿಕ ಮುಖಂಡರಾದ ಇಬ್ರಾಹೀಂ ಮದಕ, ರಫೀಕ್ ಹರೇಕಳ, ರಿಝ್ವಾನ್ ಹರೇಕಳ ಮತ್ತಿತರರು ಉಪಸ್ಥಿತರಿದ್ದರು.