ಖಾಸಗೀಕರಣವನ್ನು ವಿರೋಧಿಸಿ ಬಂಟ್ವಾಳ ಮೆಸ್ಕಾಂ ಕಚೇರಿಯಲ್ಲಿ ನೌಕರರ ಕಾರ್ನರ್ ಮೀಟಿಂಗ್
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಒಕ್ಕೂಟ, ಕೆಇಬಿ ನೌಕರರ ಸಂಘ, ಇಂಜಿನಿಯರುಗಳ ಸಂಘ ಸಹಿತ ನಾನಾ ಸಂಘಟನೆಗಳ ನೇತೃತ್ವದಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ಸಂತೋಷ್ ನಾಯಕ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.
ಮೆಸ್ಕಾಂ ಕಂಪೆನಿಯು ತನ್ನ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ವಿದ್ಯುತ್ ಹೊತೆಗೆ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದು, ಸರಕಾರ ಜಾರಿಗೆ ತಂದಿರುವ ಜನಪರ ಹಾಗೂ ರೈತ ಪರವಾದ ಉಚಿತ ವಿದ್ಯುತ್ ಯೋಜನೆಗಳನ್ನು ಸಮರ್ಪಕವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕ ಅಸ್ತಿಯನ್ನು ಯಾವುದೇ ಒಂದು ಖಾಸಗಿ ಕಂಪೆನಿಗೆ ವರ್ಗಾಯಿಸುವುದು ಕಾನೂನಿನ ವಿರುದ್ದವಾಗಿರುತ್ತದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಕ.ವಿ.ಪ್ರ.ನಿ. ನೌಕರರ ಸಂಘ ಉಪಾಧ್ಯಕ್ಷರಾದ ಕೆ. ಶಂಕರ್ ಪ್ರಕಾಶ್, ಡಿಪ್ಲೋಮ ಇಂಜಿನಿಯರ್ ಸಂಘದ ರಾಜ್ಯಾಧ್ಯಕ್ಷ ರಾಮಚಂದ್ರ, ಮಂಗಳೂರು ವೃತ್ತದ ಸಂಘಟನಾ ಕಾರ್ಯದರ್ಶಿ ಷಣ್ಮುಖಪ್ಪ ಬಾವಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರುಗಳಾದ ನಾರಾಯಣ್.ಜಿ, ಸುಬ್ರಮಣ್ಯ ಪ್ರಸಾದ್ ಬಿ.ಜಿ , ಭವತಾರಿಣಿ, ಕ.ವಿ.ಪ್ರ.ನಿ ನೌಕರರ ಸಂಘ ಕೇಂದ್ರ ಸಮಿತಿ ಸದಸ್ಯರಾದ ರಾಜೇಶ್.ಬಿ, ಕರಿಬಸಪ್ಪ, ಭಾಸ್ಕರ್ ಹಾಗೂ ಬಂಟ್ವಾಳ ವಿಭಾಗದ ಅಧಿಕಾರಿ ಮತ್ತು ನೌಕರರರು ಭಾಗವಹಿಸಿ ಖಾಸಗೀಕರಣದ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿ ತೀರ್ಮಾನ ಕೈಗೊಳ್ಳಲಾಯೊತು.