ಅಕ್ರಮ ಆನೆದಂತ ಸಾಗಾಟ ಪತ್ತೆ: ಮೂವರು ವಶ

ಅಕ್ರಮ ಆನೆದಂತ ಸಾಗಾಟ ಪತ್ತೆ: ಮೂವರು ವಶ

ಮಂಗಳೂರು: ಮಂಗಳೂರು ನಗರದ ಪದವು ಗ್ರಾಮದ ಜೋಡುಕಟ್ಟೆ ಮರೋಳಿ ಹತ್ತಿರ ಜೂನ್ 11 ರಂದು ಅಕ್ರಮವಾಗಿ ಆನೆದಂತಗಳನ್ನು ಮಾರಾಟಕ್ಕೆ ಯತ್ನಿಸುತಿದ್ದ ಬೆಳ್ತಂಗಡಿ ಶಶಾಂಕ ಪುದುವೆಟ್ಟು, ಮಂಜೇಶ್ವರದ ಅಬ್ದುಲ್ ಖಾದರ್, ಅತ್ತಾವರದ ಪ್ರಭಾಚಂದ್ರ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ 2 ಕಾರು ಮತ್ತು 42.700 ಕಿ.ಗ್ರಾಂ ತೂಕದ 2 ಆನೆದಂತಗಳನ್ನು ವಶಪಡಿಸಿಕೊಳ್ಳಲಾಗಿದೆ.  

ಈ ಕಾರ್ಯಾಚರಣೆಯಲ್ಲಿ ಬೆಂಗಳೂರು, ಮತ್ತು ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಪವನ್‍ನೆಜ್ಜೂರು ಐ.ಪಿ.ಎಸ್ ಅವರ ಮಾರ್ಗದರ್ಶನದಲ್ಲಿ  ಮಂಗಳೂರು ಸಿ.ಐ.ಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಉಪನಿರೀಕ್ಷಕ ದಿಲೀಪ್ ಜಿ.ಆರ್ ಹಾಗೂ ಸಿಬ್ಬಂದಿಗಳಾದ ಜಯರಾಮ ಕೆ.ಟಿ, ಬಾಲಕೃಷ್ಣ ಕೆ.ಎಂ, ತಾರನಾಥ ಎಸ್ ಮತ್ತು ಅಬ್ದುಲ್ ರವೂಫ್ ಭಾಗವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article