ಯು.ಟಿ. ಖಾದರ್ ಖಾಸಗಿ ವೈದ್ಯಕೀಯ ಕಾಲೇಜುಗಳ ಸಚಿವರಂತೆ ವರ್ತಿಸುತ್ತಿದ್ದಾರೆ: ಮುನೀರ್ ಕಾಟಿಪಳ್ಳ ಕಿಡಿ
ಸಿಪಿಐಎಂ ವತಿಯಿಂದ ಉಳ್ಳಾಲ ಸರಕಾರಿ ಆಸ್ಪತ್ರೆ ಮುಂಭಾಗ ಮಾನವ ಸರಪಳಿ
ಪ್ರಾಸ್ತಾವಿಕವಾಗಿ ಮಾತನಾಡಿದ CPIM ಉಳ್ಳಾಲ ವಲಯ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಅವರು, ಜನತೆಯ ಆರೋಗ್ಯವನ್ನು ಕಾಪಾಡಬೇಕಾದ ರಾಜ್ಯ ಸರಕಾರ ಯಾವುದೇ ಮುಲಾಜಿಲ್ಲದೆ ಆರೋಗ್ಯ ಕ್ಷೇತ್ರವನ್ನೇ ಖಾಸಗಿಯವರ ಸುಪರ್ದಿಗೆ ಕೊಡುವ ಮೂಲಕ ಇಡೀ ದೇಶದ ಸಂಪತ್ತನ್ನು ಮಾರಿದ ಬಿಜೆಪಿಯವರಿಗಿಂತ ತಾನೇನೂ ಕಡಿಮೆ ಇಲ್ಲ ಎಂಬ ಸಂದೇಶವನ್ನು ನೀಡಿದೆ. ಅರೋಗ್ಯ ಕ್ಷೇತ್ರದ ಮಾರಾಟದಿಂದ ಜನತೆಯನ್ನು ಅನಾರೋಗ್ಯಕ್ಕೆ ತಳ್ಳಲು ಹೊರಟ ಯು.ಟಿ. ಖಾದರ್ ಅವರ ನಡೆ ಅನಾರೋಗ್ಯದ ಕಡೆ ಎಂಬಂತಾಗಿದೆ ಎಂದು ವ್ಯಂಗ್ಯವಾಡಿದರು.
ಸಭೆಯನ್ನುದ್ದೇಶಿಸಿ CPIM ಹಿರಿಯ ನಾಯಕರಾದ ಕೃಷ್ಣಪ್ಪ ಸಾಲ್ಯಾನ್, ಯು. ಜಯಂತ ನಾಯಕ್ ಅವರು ಮಾತನಾಡಿದರು
ಮಾನವ ಸರಪಳಿಯಲ್ಲಿ CPIM ಜಿಲ್ಲಾ ನಾಯಕರಾದ ಶೇಖರ್ ಕುಂದರ್, ರಫೀಕ್ ಹರೇಕಳ, ಪದ್ಮಾವತಿ ಶೆಟ್ಟಿ, ಉಳ್ಳಾಲ ವಲಯ ಮುಖಂಡರಾದ ಪ್ರಮೋದಿನಿ, ವಿಲಾಸಿನಿ, ರೋಹಿದಾಸ್,ಜನಾರ್ದನ ಕುತ್ತಾರ್,ಚಂದ್ರಹಾಸ ಪಿಲಾರ್, ಸುಂದರ ಕುಂಪಲ,ಇಬ್ರಾಹಿಂ ಅಂಬ್ಲಮೊಗರು, ಪದ್ಮನಾಭ ಕುಂಪಲ,ಮಹಾಬಲ ದೆಪ್ಪಲಿಮಾರ್,ಅಶ್ರಫ್ ಹರೇಕಳ, ಇಕ್ಬಾಲ್ ಹರೇಕಳ,DYFI ಜಿಲ್ಲಾ ನಾಯಕರಾದ ರಿಜ್ವಾನ್ ಹರೇಕಳ,ಅಮೀರ್ ಉಳ್ಳಾಲಬೈಲ್,ಅಸ್ಪಕ್ ಅಳೇಕಲ, ಶ್ರಾವಣ್ ಕುತ್ತಾರ್,ದೀಕ್ಷಿತ್ ಕುತ್ತಾರ್,ಸದಾಶಿವ ಕುತ್ತಾರ್, ನವೀನ್ ಗಿರಿಯಮೂಲೆ, ಚಂದ್ರಶೇಖರ್ ಪಿಲಾರ್,ಸುಂದರ ಪೂಜಾರಿ ಸೇರಿದಂತೆ ನೂರಾರು ಸಂಖ್ಯೆಯ ಕಾರ್ಯಕರ್ತರು, ಸಾರ್ವಜನಿಕರು ಹಾಜರಿದ್ದರು.

