ಪಿಎಂ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆ: ಮಾದರಿ ಗ್ರಾಮವಾಗಿ ಕೋಟತಟ್ಟು ಗ್ರಾಮ ಆಯ್ಕೆ
Thursday, June 25, 2026
ಮಂಗಳೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನಮಂತ್ರಿ ಸೂರ್ಯಘರ್ ಯೋಜನೆಯ ಉಡುಪಿ ಜಿಲ್ಲೆಯಲ್ಲಿ ಮಾದರಿ ಸೋಲಾರ್ ಗ್ರಾಮವನ್ನು ಆಯ್ಕೆಮಾಡುವ ಸಲುವಾಗಿ ಜಿಲ್ಲಾ ಮಟ್ಟದ ಸಮಿತಿಯಿಂದ ನಡೆದ ಸಭೆಯಲ್ಲಿ 5 ಗ್ರಾಮವನ್ನು ಆಯ್ಕೆ ಮಾಡಲಾಗಿದೆ.
ಈ ಗ್ರಾಮಗಳಲ್ಲಿ ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾಮವು 31.12.2025 ರ ವರೆಗೆ ಅಳವಡಿಸಿದ ಸೋಲಾರ್ ಘಟಕಗಳ ಸಾಮರ್ಥ್ಯವು ಅಧಿಕವಾಗಿದ್ದು, ಸದರಿ ಗ್ರಾಮವನ್ನು 19.02.2026 ರಂದು ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾದರಿ ಸೋಲಾರ್ ಗ್ರಾಮವಾಗಿ ಆಯ್ಕೆ ಮಾಡಲಾಗಿರುತ್ತದೆ.
ಮಾದರಿ ಸೋಲಾರ್ ಗ್ರಾಮ ಅಭಿವೃದ್ದಿಗಾಗಿ ನವ ಮತ್ತು ನವೀಕರಿಸಬಹುದಾದ ಇಂಧನ ಇಲಾಖೆಯು ರೂ.1 ಕೋಟಿಯ ಸಹಾಯಧನವನ್ನು ಅನುಷ್ಟಾನಗೊಳಿಸುವ ಸಂಸ್ಥೆಗೆ ನೀಡುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.