‘ಪಕ್ಷಕ್ಕಾಗಿ ಕೆಲಸ ಮಾಡದವರು ಕಾಂಗ್ರೆಸ್ ಬಗ್ಗೆ ಮಾತನಾಡುವುದು ಬೇಡ’: ಯು.ಟಿ. ಖಾದರ್

‘ಪಕ್ಷಕ್ಕಾಗಿ ಕೆಲಸ ಮಾಡದವರು ಕಾಂಗ್ರೆಸ್ ಬಗ್ಗೆ ಮಾತನಾಡುವುದು ಬೇಡ’: ಯು.ಟಿ. ಖಾದರ್


ಮಂಗಳೂರು: ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡದವರು ಪಕ್ಷದ ಬಗ್ಗೆ ಮಾತನಾಡುವುದು ಬೇಡ. ಪಕ್ಷಕ್ಕೆ ಓಟ್ ಹಾಕಿದವರು, ಪಕ್ಷಕ್ಕೆ ದುಡಿದವರು ಮಾತ್ರ ಪಕ್ಷದ ಬಗ್ಗೆ ಮಾತನಾಡಲಿ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಮುಸ್ಲಿಮರಿಗೆ ಸಚಿವ ಸ್ಥಾನ ನೀಡಲು ಆಗ್ರಹಿಸಿ ಮಂಗಳೂರಿನಲ್ಲಿ ಮುಸ್ಲಿಮ್ ನಾಯಕರ ಸುದ್ದಿಗೋಷ್ಠಿಗೆ ಸಂಬಂಧಿಸಿ ಸುದ್ದಿಗಾರರ ಪ್ರಶ್ನೆಗೆ ಮಂಗಳವಾರ ಮಂಗಳೂರಿನಲ್ಲಿ ಅವರು ಉತ್ತರಿಸಿದರು. 

ಸಮಾನ ಮನಸ್ಕ ಮುಸ್ಲಿಮ್ ಮುಖಂಡರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಬೇರೆ ಬೇರೆ ಹೆಸರು ಇಟ್ಟುಕೊಂಡು, ಸಮಾನಮನಸ್ಕರು ಅಂತ ಹೇಳಿಕೊಂಡು ಬರುವುದು ಬೇಡ. ಕಾಂಗ್ರೆಸ್‌ಗೆ ಇವರು ಬುದ್ಧಿವಾದ ಹೇಳುವ ಅವಶ್ಯಕತೆ ಇಲ್ಲ. ಇವರ ಬುದ್ಧಿವಾದ ಪಕ್ಷ ತೆಗೆದುಕೊಳ್ಳುವುದಿಲ್ಲ. ಪಕ್ಷವನ್ನು ವಿರೋಧ ಮಾಡಿದವರು ಇವತ್ತು ಕೂತು ಪಕ್ಷಕ್ಕೆ ನಿರ್ದೇಶನ ಕೊಡುವ ಅಗತ್ಯ ಇಲ್ಲ ಎಂದರು. 

ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರಿಗೆ ಸಚಿವ ಸ್ಥಾನ ಮಾತ್ರ ಅಲ್ಲ, ಎಲ್ಲವೂ ಕೊಟ್ಟಿದೆ. ಝಮೀರ್ ಅಹ್ಮದ್, ನಾವು ಹಾಗೂ ಎಲ್ಲ ಮುಸ್ಲಿಮರು ಒಟ್ಟಿಗೆ ಇದ್ದೇವೆ. ಪಕ್ಷದ ಅಧ್ಯಕ್ಷರು, ಸಿಎಂ ಎಲ್ಲ ಸೇರಿ ಅಲ್ಪಸಂಖ್ಯಾತರಿಗೆ ಅವಕಾಶ ಕೊಡುತ್ತಾರೆ. ರಾಜಕೀಯವಾಗಿ ಇನ್ನಷ್ಟು ಇದನ್ನು ಬಿಗಡಾಯಿಸುವ ಕಾಂಗ್ರೆಸ್‌ಗೆ ಮತ ಹಾಕದವರನ್ನು ನಾವು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು. 

ಬಿಡದಿ ಟೌನ್ ಶಿಪ್ ಬಗ್ಗೆ ಕೇಳಿದ ಪ್ರಶ್ನೆಗೆ, ಅದರ ಬಗ್ಗೆ ಮುಖ್ಯಮಂತ್ರಿ ಮತ್ತು ಕೇಂದ್ರದ ಸಚಿವರು ಮಾರ್ಗದ ಮಧ್ಯೆ ಚರ್ಚೆ ಮಾಡಲು ಆಗ್ತದಾ..? ವಿಧಾನಸೌಧ ಇರೋದು ರಾಜ್ಯದ ಜನರ ಬಗ್ಗೆ ಚರ್ಚೆ ಮಾಡಲು. ಟೌನ್ ಶಿಪ್ ಬಗ್ಗೆ ಮುಖ್ಯಮಂತ್ರಿ ಮತ್ತು ಕೇಂದ್ರದ ಸಚಿವರು ಮಾರ್ಗದ ಮಧ್ಯೆ ಚರ್ಚೆ ಮಾಡಲಾಗದು. ವಿಧಾನಸೌಧ ಅದಕ್ಕೆ ಸೂಕ್ತ ಜಾಗ, ಅದು ಜನರಿಗೆ ಎಲ್ಲರಿಗೂ ಅರ್ಥವಾಗುತ್ತದೆ. ಈ ಬಿಡದಿ ಟೌನ್ ಶಿಪ್ ನೋಟಿಫಿಕೇಶನ್ ಮಾಡಿದ್ದು ಯಾರು ಅಂತ ಜನರಿಗೆ ಮೊದಲು ತಿಳಿಸಲಿ. 

ನೋಟಿಫಿಕೇಶನ್ ಮಾಡಿದ್ದು ಯಾರೆಂಬ ಸತ್ಯ ವಿಚಾರ ಜೆಡಿಎಸ್ ಮುಖಂಡರು ಹೇಳಲಿ. ಅದು ಮಾಡಿದ್ದೇ ಇವರು, ಆ ಸತ್ಯ ಗೊತ್ತಾಗಲಿ. ಕಾಂಗ್ರೆಸ್ ಪಕ್ಷ ರೈತರ ಪರವಾಗಿ ಇದ್ದದ್ದು, ಈ ದೇಶದ ರೈತರು ವಿಶ್ವಕ್ಕೆ ಮಾದರಿ. ಅದಕ್ಕೆ ಪೂರಕವಾದ ವಾತಾವರಣ ನಿರ್ಮಾಣ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷ ಎಂದಿಗೂ ರೈತರ ಪರ ಆಲೋಚನೆ ಮಾಡುತ್ತದೆ. ರೈತರಿಗೆ ತೊಂದರೆ ಆಗೋ ಯಾವುದೇ ಯೋಜನೆ ಮಾಡಲ್ಲ ಅಂತ ಸಿಎಂ ಹೇಳಿದ್ದಾರೆ. ರೈತರಿಗೆ, ಅವರ ಕುಟುಂಬಕ್ಕೆ ಈ ಯೋಜನೆ ಸಹಾಯವಾಗಲಿದೆ. ಕೆಲವರು ರಾಜಕೀಯ ಮಾತನಾಡ್ತಾರೆ, ರಾಜಕೀಯ ಬಿಟ್ಟು ಹೊರಗೆ ಬನ್ನಿ ಟಾಂಗ್ ನೀಡಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article