ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ವತಿಯಿಂದ ಪರಿಸರ ದಿನಾಚರಣೆ

ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ವತಿಯಿಂದ ಪರಿಸರ ದಿನಾಚರಣೆ


ಮಂಗಳೂರು: ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ಮಂಗಳೂರು ಲೀಜನ್ ವತಿಯಿಂದ ಬೊಂದೇಲ್ ಕೃಷ್ಣ ನಗರದ ಬಾಲಕರ ಬಾಲ ಮಂದಿರದಲ್ಲಿ ಪರಿಸರ ದಿನಾಚರಣೆ ನಡೆಯಿತು.

ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ಪೂರ್ವ ಅಂತಾರಾಷ್ಟ್ರೀಯ ಅಧ್ಯಕ್ಷ ಹಾಗೂ ಎಸ್‌ಸಿಐ ಫೌಂಡೇಶನ್ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷ ಡಾ.ಕೇದಿಗೆ ಅರವಿಂದ ರಾವ್, ಮಂಗಳೂರು ಘಟಕದ ಅಧ್ಯಕ್ಷ ಹರೀಶ್ ಎ., ನಿಕಟಪೂರ್ವ ಅಧ್ಯಕ್ಷ ವಿಕಾಸ್ ಶೆಟ್ಟಿ, ಮಾಜಿ ಅಧ್ಯಕ್ಷ ದತ್ತಾತ್ರೆಯ ಬಾಳ, ಜೊತೆ ಕಾರ್ಯದರ್ಶಿ ನಾಗೇಶ್ವರಿ, ಸದಸ್ಯರಾದ ನಿರ್ಮಲಾ, ಶಿವರಾಮ ಎಂ., ನಂದಕುಮಾರ್, ರವಿ ಎಚ್.ಎಂ., ಬಾಲ ಮಂದಿರದ ಅಽಕ್ಷಕಿ ಶಾರದಾ ಪ್ರಸಾದಿನಿ ಭಾಗವಹಿಸಿದ್ದರು. 

ವಿವಿಧ ಬಗೆಯ ಹಣ್ಣಿನ ಗಿಡಗಳನ್ನು ನೆಟ್ಟು ಮಕ್ಕಳಲ್ಲಿ ಪರಿಸರ ಜಾಗೃತಿಯನ್ನು ಮೂಡಿಸಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article